ಬ್ರಹ್ಮವಾಹಕ ಸುಕುಮಾರ್ ಪುರೋಹಿತ ಹೃದಯಾಘಾತದಿಂದ ನಿಧನ
Sunday, December 28, 2025
ಕರಾವಳಿಯ ಅನೇಕ ದೇವಸ್ಥಾನಗಳಲ್ಲಿ ಬ್ರಹ್ಮ ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಉಡುಪಿಯ ಶಿರ್ವ ಕುತ್ಯಾರು ನಿವಾಸಿ ಸುಕುಮಾರ್ ಪುರೋಹಿತರು (42)) ಇಂದು ಬೆಳಿಗ್ಗೆ ಹೃದಯಘಾತದಿಂದಾಗಿ ನಿಧನ ಹೊಂದಿದರು.
ಇವರು ತಾಯಿ, ಪತ್ನಿ, ಓರ್ವ ಪುತ್ರ ಓರ್ವ ಪುತ್ರಿ, ಓರ್ವ ಸಹೋದರಿ, ಇಬ್ಬರು ಸಹೋದರರು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಮೂಡಬಿದ್ರೆ ಶ್ರೀ ಕಾಳಿಕಾಂಬಾ ದೇವಸ್ಥಾನ, ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ, ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೆಶ್ವರ ದೇವಸ್ಥಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಬ್ರಹ್ಮ ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಸುಕುಮಾರ್ ಪುರೋಹಿತ ಅವರ ನಿಧನಕ್ಕೆ ದೇವಸ್ಥಾನಗಳ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ.
