ಮೂಡುಶೆಡ್ಡೆಯಲ್ಲಿ ತಾಯಿಗೆ ಹಲ್ಲೆ ಪ್ರಕರಣ; ಮಗಳು ನೇತ್ರಾವತಿ ವಿರುದ್ಧ ದೂರು
Tuesday, December 02, 2025
ಮಂಗಳೂರಿನ ಮೂಡುಶೆಡ್ಡೆ ಪಂಚಾಯತ್ ಎದುರು ತಾಯಿ ಮತ್ತು ಮಗಳ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಇದೀಗ ಹಲ್ಲೆಗೊಳಗಾದ ತಾಯಿಯ ನೆರವಿಗೆ ಮಹಿಳಾ ಸಂರಕ್ಷಣಾ ವೇದಿಕೆ ಮುಂದಾಗಿದೆ.
ತಾಯಿ ಮೇಲೆ ಹಲ್ಲೆಗೈದ ಮಗಳು ನೇತ್ರಾವತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಹಿರಿಯ ನಾಗರಿಕರಾಗಿರುವ ನಿರ್ಮಲಾ ಅವರಿಗೆ ನ್ಯಾಯ ಕೊಡಿಸಬೇಕೆಂದು ಮಹಿಳಾ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ. ಸಾಮಾಜಿಕ ಚಿಂತಕಿ ರಮಿತಾ ಸೂರ್ಯವಂಶಿ ಮತ್ತು ಹಿಂದೂ ಜಾಗರಣ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ದೀಕ್ಷಿತ್ ಈ ಸಂದರ್ಭ ಉಪಸ್ಥಿತರಿದ್ದರು.
ತಾಯಿಯ ಮೇಲೆ ಮಗಳು ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.