ನಿಲ್ಲಿಸಿದ್ದ ರಿಕ್ಷಾ ಕಳವುಗೈದ ಆರೋಪಿಯ ಬಂಧನ
Monday, December 29, 2025
ಮಂಗಳೂರು ಹೊರವಲಯದ ಉಳ್ಳಾಲ ಚೋಟಾ ಮಂಗಳೂರು ಭಗವತಿ ರಸ್ತೆಯಲ್ಲಿ ನಿಲ್ಲಿಸಿದ್ದ ರಿಕ್ಷಾವೊಂದನ್ನು ಕಳವುಗೈದ ಕಳ್ಳನೊಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಅಕ್ಕರೆ ಕೆರೆ ನಿವಾಸಿ ಮುಹಮ್ಮದ್ ಶಾಝಿಲ್ (29) ಬಂಧಿತ ಆರೋಪಿ. ಬಂಧಿತನಿಂದ ಕಳವುಗೈದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ಚೋಟ ಮಂಗಳೂರು ನಿವಾಸಿ ನರೇಂದ್ರ ಕುಮಾರ್ ಅವರು ತನ್ನ ಆಟೋ ರಿಕ್ಷಾವನ್ನು ಮನೆಯ ಕಂಪೌಂಡ್ ನ ಹೊರಗಡೆ ಇರುವ ಭಗವತಿ ರಸ್ತೆಯಲ್ಲಿ ಡಿಸೆಂಬರ್ 13ರಂದು ರಾತ್ರಿ ನಿಲ್ಲಿಸಿದ್ದರು. ಆದರೆ ರಿಕ್ಷಾವು ಕಳವಾಗಿದ್ದು, ಈ ಬಗ್ಗೆ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.