-->
 ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ಮಿಗ್-21 ಯುದ್ಧವಿಮಾನ ಶಾಶ್ವತ ಪ್ರದರ್ಶನ

ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ಮಿಗ್-21 ಯುದ್ಧವಿಮಾನ ಶಾಶ್ವತ ಪ್ರದರ್ಶನ


ಸೋವಿಯತ್ ಒಕ್ಕೂಟದಲ್ಲಿ ವಿನ್ಯಾಸಗೊಂಡು 1963ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಮಿಗ್-21 ಶ್ರೇಣಿಯ ಯುದ್ಧವಿಮಾನವು 62 ವರ್ಷಗಳ ಸೇವೆಯ ನಂತರ ಇದೀಗ ಉಡುಪಿ ಜಿಲ್ಲೆಯ ಕೋಟ ಕಾರಂತ ಕಲಾಭವನದಲ್ಲಿ ಶಾಶ್ವತ ಪ್ರದರ್ಶನಕ್ಕೆ ಸಿದ್ಧವಾಗಿದೆ. 


ಶಬ್ದದ ವೇಗಕ್ಕಿಂತ ದ್ವಿಗುಣ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿರುವ ಈ ವಿಮಾನವು ಕಾರ್ಗಿಲ್ ಯುದ್ಧ ಸೇರಿದಂತೆ ಅನೇಕ ಪ್ರಮುಖ ಯುದ್ಧಗಳಲ್ಲಿ ಭಾಗವಹಿಸಿದ್ದು, 2019ರಲ್ಲಿ ಬಾಲಾಕೋಟ್ ಬಳಿ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಹುಟ್ಟೂರಾದ ಕೋಟದಲ್ಲಿ ಸ್ಥಾಪಿತವಾದ ಕಾರಂತ ಥೀಮ್ ಪಾರ್ಕ್‌ನಲ್ಲಿ ಕರಾವಳಿಯ ಪ್ರಥಮ ಶಾಶ್ವತ ಯುದ್ಧವಿಮಾನ ಪ್ರದರ್ಶನ ತಾಣ ರೂಪುಗೊಂಡಿದ್ದು, ದೆಹಲಿಯಿಂದ ತರಿಸಲಾದ ಮಿಗ್-21 ವಿಮಾನವನ್ನು 15 ಸದಸ್ಯರ ತಾಂತ್ರಿಕ ತಂಡ ಮರುಜೋಡಣೆ ಮಾಡಿ ಸ್ಥಾಪಿಸಿದೆ. ಈ ಮಹತ್ವದ ಯೋಜನೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮುತುವರ್ಜಿ ಪ್ರಮುಖ ಕಾರಣವಾಗಿದೆ.

ಸಾಹಿತ್ಯ, ವಿಜ್ಞಾನ ಮತ್ತು ರಾಷ್ಟ್ರರಕ್ಷಣೆಯ ಅಪರೂಪದ ಸಂಗಮದಂತೆ ಕಾರಂತರ ನೆನಪಿನಂಗಳದಲ್ಲಿ ಸ್ಥಾಪಿತವಾದ ಈ ಯುದ್ಧವಿಮಾನವು ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಆಕರ್ಷಣೆಯ ಕೇಂದ್ರವಾಗಿದ್ದು, ಇಡೀ ಕರಾವಳಿ ಭಾಗಕ್ಕೆ ಹೊಸ ಹೆಮ್ಮೆಯ ಗರಿಯಾಗಿದೆ. 



Ads on article

Advertise in articles 1

advertising articles 2

Advertise under the article