ರಾಯಲ್ ಪ್ರವೀಣ್ ಡಿಸೋಜಾ ಅವರಿಗೆ ಪಿಎಚ್‌ಡಿ ಪದವಿ
Monday, January 05, 2026
ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ಸಹಾಯಕ ಡೀನ್ ಮತ್ತು ಎಐ ಮತ್ತು ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್ನ ಅಧ್ಯಕ್ಷ ರಾಯಲ್ ಪ್ರವೀಣ್ ಡಿಸೋಜಾ ಅವರಿಗೆ “ಸಾಫ್ಟ್ ಕಂಪ್ಯೂಟಿOಗ್ ತಂತ್ರಗಳನ್ನು ಬಳಸಿಕೊಂಡು ಕೃಷಿ ಬೆಳೆ ಇಳುವರಿ ಮುನ್ಸೂಚನೆಗೆ ಒಂದು ನವೀನ ವಿಧಾನ” ಎಂಬ ಶೀರ್ಷಿಕೆಯ ಪ್ರಬಂಧಕ್ಕಾಗಿ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ನೀಡಿದೆ.
ಇವರು ಬೆಂಗಳೂರಿನ ಸೃಷ್ಟಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಶೋಧನಾ ಮಾರ್ಗದರ್ಶಿ ಡಾ. ಜಿ. ಎನ್. ಕೆ. ಸುರೇಶ್ ಬಾಬು ಅವರ ಯಶಸ್ವಿ ಮಾರ್ಗದರ್ಶನದಲ್ಲಿ ಅವರು ತಮ್ಮ ಸಂಶೋಧನೆಯನ್ನು ನಡೆಸಿದ್ದರು.
ರಾಯಲ್ ಪ್ರವೀಣ್ ಡಿಸೋಜಾರವರು ಪಿಯಸ್ ಡಿಸೋಜಾ ಮತ್ತು ಲಿಡ್ವಿನ್ ಡಿಸೋಜಾ ಅವರ ಪುತ್ರ ಹಾಗೂ ಆನೆಟ್ ಪ್ರೀತಿ ಮೊಂತೇರೊ ಅವರ ಪತಿ.