ಅಯೋಧ್ಯೆ ರಾಮನಿಗೆ 286 ಕೆಜಿ ತೂಕದ ಸ್ವರ್ಣ ಧನಸ್ಸು ಅರ್ಪಣೆ
Friday, January 23, 2026
ಒಡಿಶಾದಿಂದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕೆ 286 ಕೆಜಿ ತೂಕದ ಸ್ವರ್ಣ ಧನಸ್ಸು ಆಗಮಿಸಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಈ ಅಪರೂಪದ ಧನಸ್ಸು ಭಕ್ತರಲ್ಲಿ ಅಪಾರ ಭಕ್ತಿ ಮೂಡಿಸಿದೆ.
ಈ ಸ್ವರ್ಣ ಧನುಸ್ಸನ್ನು ತಮಿಳುನಾಡಿನ ಕಾಂಚೀಪುರOನ ಮಹಿಳಾ ಕುಶಲಕರ್ಮಿಗಳು ನೈಪುಣ್ಯದಿಂದ ರೂಪಿಸಿದ್ದಾರೆ. ಚಿನ್ನ, ಬೆಳ್ಳಿ, ತಾಮ್ರ, ಸತು ಹಾಗೂ ಕಬ್ಬಿಣದ ಮಿಶ್ರಲೋಹದಿಂದ ಈ ಧನಸ್ಸು ತಯಾರಿಸಲ್ಪಟ್ಟಿದ್ದು, ಅದರ ನಿರ್ಮಾಣ ಕಾರ್ಯ ಒಡಿಶಾದಲ್ಲಿ ಪೂರ್ಣಗೊಂಡಿದೆ.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಮಂದಿರದ ಉದ್ಘಾಟನೆಯ ಬಳಿಕ ದೇಶದ ನಾನಾ ಭಾಗಗಳಿಂದ ಭಕ್ತರು ದರ್ಶನಕ್ಕೆ ಹರಿದು ಬರುತ್ತಿದ್ದಾರೆ. ದಿನೇದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಮ ಮಂದಿರ ಭಕ್ತಿಯ ಕೇಂದ್ರವಾಗುತ್ತಿದೆ.