ವಾಟ್ಸಾಪ್ ನಲ್ಲಿ ಬಂದ ನಕಲಿ ಷೇರು ಮಾರುಕಟ್ಟೆ ನಂಬಿ ಹೂಡಿಕೆ; 30 ಲಕ್ಷ ಹಣ ಕಳೆದುಕೊಂಡ ವೃದ್ಧ
ನಿವೃತ್ತ ಉದ್ಯೋಗಿ ವೃದ್ದರೊಬ್ಬರು ವಾಟ್ಸಪ್ ನಲ್ಲಿ ಬಂದ ನಕಲಿ ಷೇರು ಮಾರುಕಟ್ಟೆ ಗ್ರೂಪ್ ಗಳನ್ನು ನಂಬಿ ಬರೋಬ್ಬರಿ 30 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ್
ಮಣಿಪಾಲದ ನಿವಾಸಿಯಾಗಿರುವ ನಿವೃತ್ತ ಉದ್ಯೋಗಿ ZERODHA DMAT ನಲ್ಲಿ ಖಾತೆಯನ್ನು ಹೊಂದಿದು, ಷೇರು ಮಾರ್ಕೇಟ್ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದರು, ಆದರೆ ಅದರಲ್ಲಿ ಲಾಭಾಂಶ ಕಡಿಮೆ ಬರುತ್ತಿತ್ತು. ಈ ನಡುವೆ 2025 ರ ಅ. 22 ರಂದು Harnish Mahesh Shukla ಎಂಬ ಹೆಸರಿನಲ್ಲಿ ವಾಟ್ಸಾಫ್ ಮೂಲಕ ಮೆಸೇಜ್ ಬಂದಿದ್ದು, ಆ ವ್ಯಕ್ತಿ ಷೇರ್ ಮಾರ್ಕೇಟ್ ಬಗ್ಗೆ ಚಾಟ್ ಮಾಡಿ ವೃದ್ದರನ್ನು A1197BR JALAN Trading Hub ಎಂಬ ವಾಟ್ಸಾಪ್ ಗ್ರೂಪ್ಗೆ ಸೇರಿಸಿರುತ್ತಾರೆ. ಅ. 23 ರಂದು Harnish Mahesh Shukla ಎಂಬವರು ACMESOLAR ಎಂಬ ಹೆಸರಿನ ಕಂಪೆನಿಯ Stock ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದ್ದು, ಅದರಂತೆ ವೃದ್ದರು ತನ್ನ DMAT Account ಮುಖಾಂತರ ACMESOLAR ಕಂಪೆನಿಯ 10 ಷೇರನ್ನು ಪಡೆದುಕೊಂಡು ಮಾರಾಟ ಮಾಡಿದ್ದು, ಅದರಲ್ಲಿ 900/- ರೂಪಾಯಿ ನಷ್ಟ ಆಗಿರುತ್ತದೆ.
ನಂತರ ಹರ್ನೀಷ್ರವರು ನಮ್ಮ B.R. JALAN SECURITIES ಷೇರ್ ಮಾರ್ಕೇಟ್ನಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಿದ್ದಾರೆ. ಅದರಂತೆ ನ.6 ರಿಂದ ನ.31 ರವರೆಗೆ B.R. JALAN SECURITIES ನಲ್ಲಿ ಹಾಗೂ SHOONYA SECURITIES ಹಾಗೂ UHNWIS SECURITIES ಎಂಬ ಇನ್ನೆರಡು ಸ್ಟಾಕ್ ಮಾರ್ಕೇಟ್ ಕಂಪೆನಿಗಳಲ್ಲಿ ಅವರು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 30,32,000/- ರೂ ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ ಸದ್ರಿ ಕಂಪೆನಿಗಳು ಪಿರ್ಯಾದಿದಾರರು ಈ ವರೆಗೆ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ವಾಪಾಸು ನೀಡದೇ ಪಿರ್ಯಾದಿದಾರರನ್ನು ನಂಬಿಸಿ ಮೋಸದಿಂದ ರೂ. 30,32,000 ನಷ್ಟ ಉಂಟು ಮಾಡಿರುತ್ತಾರೆ.
ಈ ಬಗ್ಗೆ ಸೈಬರ್ ಅಪರಾಧಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 02/2026 ಕಲಂ: 66(ಸಿ) 66(ಡಿ) ಐ.ಟಿ. ಆಕ್ಟ್, &ಕಲಂ: 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.