ಬ್ಯಾನರ್ ವಿವಾದ; ಅಂಬೇಡ್ಕರ್ ಭಾವಚಿತ್ರವಿರುವ ಬ್ಯಾನರ್ ಕಿತ್ತೆಸೆದ ನಗರಸಭೆ
Saturday, January 03, 2026
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಗಾಂಧಿಕಟ್ಟೆ ಬಳಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಬ್ಯಾನರ್‌ನ್ನು ನಗರಸಭೆ ಕಿತ್ತೆಸೆದಿದ್ದು, ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
ಅಂಬೇಡ್ಕರ್ ಭಾವಚಿತ್ರವಿರುವ ಬ್ಯಾನರ್ ಕಿತ್ತೆಸೆದ ನಗರಸಭೆ ವಿರುದ್ಧ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ನಿಯಮಿತ ಅಸಮಾಧಾನ ವ್ಯಕ್ತಪಡಿಸಿದೆ. ಸುಳ್ಯದ ಕೆವಿಜಿ ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು , ಈ ಹಿನ್ನೆಲೆ ಪುತ್ತೂರಿನಲ್ಲೂ ಕಾರ್ಯಕ್ರಮದ ಬಗ್ಗೆ ಬ್ಯಾನರ್ ಹಾಕಲಾಗಿತ್ತು. ಪುತ್ತೂರು ನಗರಸಭೆಯಿಂದ ಅನುಮತಿ ಪಡೆದು ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಬ್ಯಾನರ್ ಹಾಕಿದ್ದರು ಎನ್ನಲಾಗಿದೆ.
5 ದಿನಗಳ ಅನುಮತಿಯನ್ನು ಪುತ್ತೂರು ನಗರಸಭೆ ನೀಡಿತ್ತು. ಕಾರ್ಯಕ್ರಮಕ್ಕೆ ಒಂದು ದಿನ ಬಾಕಿ ಇರುವಾಗಲೇ ಬ್ಯಾನರ್ ನ್ನು ಕಿತ್ತೆಸೆದಿದೆ. 5 ದಿನಗಳ ಅನುಮತಿ ಇದ್ರೂ ಬ್ಯಾನರ್ ನ್ನು ಮುಂಚಿತವಾಗಿ ತೆಗೆದ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಕೂಡಲೇ ಬ್ಯಾನರ್ ನ್ನು ಎಲ್ಲಿ ಹಾಕಲಾಗಿತ್ತೋ ಅಲ್ಲೆ ಹಾಕುವಂತೆ ಪುತ್ತೂರು ನಗರಸಭೆಗೆ ಒತ್ತಾಯಿಸಿದೆ. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳನ್ನು ಒಟ್ಟುಗೂಡಿಸಿ ಪ್ರತಿಭಟನೆ ನಡೆಸಲಾಗುವುದು. ನಗರಸಭೆ ಪೌರಾಯುಕ್ತ, ಸಿಬ್ಬಂದಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.
