ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
Friday, January 23, 2026
ಹಿಂದು ಸಂಗಮ ಆಯೋಜನ ಸಮಿತಿ ಉಡುಪಿ ನಗರ, ಪೆರಂಪಳ್ಳಿ ವಸತಿ ಸಮಿತಿ ವತಿಯಿಂದ ಫೆ.1ರಂದು ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಆವರಣದಲ್ಲಿ ಶೋಭಾ ಯಾತ್ರೆ ಹಾಗೂ ಬೃಹತ್ ಹಿಂದೂ ಸಂಗಮವು ನೆರವೇರಲಿದೆ.
ಫೆಬ್ರವರಿ 1ರಂದು ಭಾನುವಾರ ಸಂಜೆ ನೆರವೇರಲಿರುವ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿ ಅವರು ಬಿಡುಗಡೆಗೊಳಿಸಿದರು. ಬಳಿಕ ಕಾರ್ಯಕ್ರಮ ಯಶಸ್ಸಾಗಲಿ ಎಂದು ಶುಭ ಹಾರೈಸಿದರು.
ವೇದಮೂರ್ತಿ ಕೊರಂಗ್ರಪಾಡಿ ಶ್ರೀಶ ಆಚಾರ್ಯ ಅವರು ಸನಾತನ ಧರ್ಮದ ಮಹಿಮೆಯನ್ನು ವಿಶ್ಲೇಷಿಸಿದರು. ಪೆರಂಪಳ್ಳಿ ವಸತಿ ವಿಭಾಗದ ಸಮಿತಿ ಸದಸ್ಯರು, ಕ್ಷೇತ್ರದ ಭಕ್ತರು ಹಾಗೂ ಉಸ್ತುವಾರಿ ಕುಸುಮ ನಾಗರಾಜ್ ಉಪಸ್ಥಿತರಿದ್ದರು