ಮಂಗಳೂರಿನ ಲಿಶಾ ಡಿ.ಸುವರ್ಣರಿಗೆ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್
Monday, January 26, 2026
ಎನ್‌ಸಿಸಿ ಕೆಡೆಟ್ ಮಂಗಳೂರಿನ ಲಿಶಾ ಡಿ.ಸುವರ್ಣರಿಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನೀಡುವ ಅತ್ಯುನ್ನತ ಪ್ರಶಂಸಾ ಗೌರವ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್ ಲಭಿಸಿದೆ.
ಜ.24ರಂದು ಹೊಸದಿಲ್ಲಿಯ ಡಿಸಿಎಂಸಿಸಿ ಕ್ಯಾಂಪಸ್‌ನಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಗೌರವ ಪ್ರಧಾನ ಮಾಡಿದರು. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನಲ್ಲಿ ಹಲವು ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಸಾಧನೆಗಳನ್ನು ಗುರುತಿಸಿ ಭಾರತೀಯ ನೇವಿ ಮೂಲಕ ಈ ಗೌರವವನ್ನು ನೀಡಲಾಗಿದೆ. ಈ ವರೆಗೆ ರಕ್ಷಾಮಂತ್ರಿ ಕಮೆಂಡೇಶನ್ ಗೌರವವು ಉತ್ತರ ಭಾರತದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನ ಕೆಡೆಟ್‌ಗಳೇ ಆಯ್ಕೆಯಾಗುತ್ತಿದ್ದು, ಇದೇ ಮೊದಲಬಾರಿಗೆ ದಕ್ಷಿಣಭಾರತದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನ ಕೆಡೆಟ್‌ಗೆ ಈ ಗೌರವ ಲಭಿಸಿದೆ. ಮಂಗಳೂರು ಕೂಳೂರು ನಿವಾಸಿ ದೇಜಪ್ಪ ಬಂಗೇರ ಹಾಗೂ ಮಲ್ಲಿಕಾ ದಂಪತಿ ಪುತ್ರಿಯಾಗಿರುವ ಇವರು ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ.
.jpeg)
