ಕೃಷ್ಣಮಠದಲ್ಲಿ ಸಂಗೀತ ಲೆಜೆಂಡ್ ಮಹೇಶ್ ಕಾಳೆ ಅವರಿಂದ ಭಕ್ತಿ ಸಂಗೀತ
Monday, January 19, 2026
ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಕೃಷ್ಣ ಮಠದ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಜ.19ರಂದು ಸಂಗೀತ ಕ್ಷೇತ್ರದ ಲೆಜೆಂಡ್ ಪಂಡಿತ್ ಮಹೇಶ್ ಕಾಳೆ ಆಗಮಿಸಲಿದ್ದಾರೆ.
ರಾತ್ರಿ 8.00 ಗಂಟೆಗೆ ಖ್ಯಾತ ಸಂಗೀತ ಕಲಾವಿದ ಮಹೇಶ್ ಕಾಳೆಯವರ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಯಲಿನ್ ರಂಗ ಪೈ, ಹಾರ್ಮೊನಿಯಂ ರವೀಂದ್ರ ಕಟೋಟಿ, ಮಂಜಿರ ವೆಂಕಟೇಶ್ ಪುರೋಹಿತ್, ತಬಲಾ ಉದಯ್ ಕುಲಕರ್ಣಿ ಮತ್ತು ಪಖಾವಾಜ್ ನಲ್ಲಿ ಗುರುಮೂರ್ತಿ ವೈದ್ಯ ಸಹಕರಿಸಲಿದ್ದಾರೆ.