ವಜ್ರ ಕವಚ ಅಲಂಕಾರದಲ್ಲಿ ಕಂಗೊಳಿಸಿದ ಕಡೆಗೋಲು ಶ್ರೀಕೃಷ್ಣ
Thursday, January 22, 2026
ಶೀರೂರು ಮಠಾಧೀಶ ವೇದ ವರ್ಧನ ಶ್ರೀಗಳಿಂದ ಪೂಜಿಸಲ್ಪಡುತ್ತಿರುವ ಉಡುಪಿಯ ಕಡೆಗೋಲು ಕೃಷ್ಣನಿಗೆ ಇಂದು ವಜ್ರ ಕವಚ ಅಲಂಕಾರ ಮಾಡಲಾಗಿದೆ.
ಪರ್ಯಾಯ ಶೀರೂರು ವೇದವರ್ಧನ ಶ್ರೀಗಳು ಕೃಷ್ಣನಿಗೆ ವಜ್ರ ಕವಚ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಶ್ರೀಕೃಷ್ಣ ಉತ್ಸವ ಪ್ರಿಯ ಹಾಗೂ ಅಲಂಕಾರ ಪ್ರಿಯ. ಹಾಗಾಗಿ ಅನಾದಿಕಾಲದಿಂದಲೂ ಪರ್ಯಾಯ ಮಠಾಧೀಶರು ಶ್ರೀಕೃಷ್ಣನಿಗೆ ವಿಭಿನ್ನ ಹಾಗೂ ವಿನೂತನ ಅಲಂಕಾರ ಮಾಡಿ ಪೂಜೆ ಸಲ್ಲಿಸುವುದು ವಾಡಿಕೆ. ಸರ್ವಜ್ಞ ಪೀಠವನ್ನು ಅಲಂಕರಿಸಿರುವ ಶೀರೂರು ವೇದವರ್ಧನ ಶ್ರೀಗಳು ಇಂದು ಶ್ರೀಕೃಷ್ಣನಿಗೆ ವಜ್ರ ಕವಚ ಅಲಂಕಾರ ಮಾಡಿ ಪೂಜಿಸಿದರು.