ಉಡುಪಿಯ ಮಾಜಿ ನಗರಸಭೆ ಸದಸ್ಯೆ ಇಂದಿರಾ ಶೇಖರ್ ಕಲ್ಮಾಡಿ ನಿಧನ
Sunday, January 04, 2026
ಉಡುಪಿ ಕಲ್ಮಾಡಿಯ ಮಾಜಿ ನಗರಸಭಾ ಸದಸ್ಯೆ ಇಂದಿರಾ ಶೆಖರ್ ಕಲ್ಮಾಡಿ ಇವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಕಲ್ಮಾಡಿಯ ವಾರ್ಡ್ ನಲ್ಲಿ ಸತತ ಎರಡು ಬಾರಿ ಬಿಜೆಪಿ ಪಕ್ಷದಿಂದ ಜಯಭೇರಿ ಬಾರಿಸಿ ನಗರಸಭೆ ಸದಸ್ಯೆಯಾಗಿದ್ದರು. ಕಲ್ಮಾಡಿಯಲ್ಲಿ ಸಮಾಜ ಸೇವೆಯ ಮೂಲಕ ಹೆಸರುವಾಸಿಯಾಗಿದ್ದಾರೆ.
ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಮತ್ತು ಪತಿಯನ್ನು ಇಂದಿರಾ ಶೇಖರ್ ಅವರು ಅಗಲಿದ್ದಾರೆ.