ಪುರೋಹಿತ ಸಿಮಂತೂರು ಜಗದೀಶ್ ಭಟ್ ನಿಧನ
Wednesday, January 21, 2026
ಆಧ್ಯಾತ್ಮ ಮತ್ತು ಪೌರೋಹಿತ್ಯದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಸಿಮಂತೂರಿನ ಪುರೋಹಿತರಾದ ಜಗದೀಶ್ ಭಟ್ (50) ಅವರು ಹೃದಯಾಘಾತದಿಂದ ನಿಧನರಾದರು.
ವೃತ್ತಿಯಲ್ಲಿ ಶ್ರದ್ಧೆ ಮತ್ತು ಸರಳ ಸ್ವಭಾವದ ಮೂಲಕ ಜನಾನುರಾಗಿಯಾಗಿದ್ದ ಜಗದೀಶ್ ಭಟ್ ಅವರಿಗೆ ಮಂಗಳವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ ಸಂಜೆಯ ಹೊತ್ತಿಗೆ ನೋವಿನ ತೀವ್ರತೆ ಹಠಾತ್ತಾಗಿ ಹೆಚ್ಚಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಒಬ್ಬ ಪುತ್ರಿ ಹಾಗೂ ಒಬ್ಬ ಪುತ್ರ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಮತ್ತು ಶಿಷ್ಯವರ್ಗವನ್ನು ಅಗಲಿದ್ದಾರೆ.