ಖ್ಯಾತ ಸಂಗೀತಗಾರ ಮಹೇಶ್ ಕಾಳೆ ಅವರಿಂದ ಅಭಂಗ ವಾರಿ
Tuesday, January 20, 2026
ಶೀರೂರು ಪರ್ಯಾಯದ ಅಂಗವಾಗಿ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸೋಮವಾರ ರಾತ್ರಿ 8 ಗಂಟೆಗೆ ಪಂಡಿತ್ ಮಹೇಶ್ ಕಾಳೆ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ " ಅಭಂಗ ವಾರಿ" ನೆರವೇರಿತು.
ದೇಶ ವಿದೇಶದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುವ ಮಹೇಶ್ ಕಾಳೆ ಅವರು 8 ಗಂಟೆಯಿOದ ರಾತ್ರಿ 10 ಗಂಟೆವರೆಗೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕೃಷ್ಣ ನಾಮ ಜಪಿಸುತ್ತಿದ್ದಂತೆ ನೆರೆದ ಸಭಿಕರು ಕೂಡಾ ಧ್ವನಿಗೂಡಿಸಿದರು. 3 ಗಂಟೆಗಳ ಕಾಲ ನಡೆದ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಪರ್ಯಾಯ ಶೀರೂರು ವೇದ ವರ್ಧನ ಶ್ರೀಗಳು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಕ್ಕವಾದ್ಯದಲ್ಲಿ ರಂಗ ಪೈ(ವಯಲಿನ್), ಗುರುಮೂರ್ತಿ ವೈದ್ಯ(ಮೃದಂಗ), ಉದಯ ಕುಲಕರ್ಣಿ(ತಬಲಾ), ರವೀಂದ್ರ ಕಾಟೋಟೆ (ಹಾರ್ಮೋನಿಯಂ), ವೆಂಕಟೇಶ್ ಪುರೋಹಿತ(ಮಂಜೀರಾ), ಅರುಂಧತಿ ವಸಿಷ್ಠ ಹಾಗೂ ಅಂಕುರ್ ಚೆಂಡೆ(ತಾನ್ ಪುರ) ಸಹಕರಿಸಿದರು. ಶೀರೂರು ವೇದ ವರ್ಧನ ಶ್ರೀಗಳು ಮಹೇಶ್ ಕಾಳೆ ಅವರನ್ನು ಶಾಲು ಹೊದಿಸಿ, ಶ್ರೀಕೃಷ್ಣನ ಮೂರ್ತಿ ನೀಡಿ ಆಶೀರ್ವಚಿಸಿದರು.



