ತೆಂಗಿನ ಎಣ್ಣೆ ಮಿಲ್‌ನಲ್ಲಿ ಬೆಂಕಿ ಆಕಸ್ಮಿಕ; ಲಕ್ಷಾಂತರ ರೂ. ನಷ್ಟ
Thursday, January 01, 2026
ಕುಂದಾಪುರ ತಾಲೂಕಿನ ಸಿದ್ದಾಪುರದ ಜನ್ಸಾಲೆ ಎಂಬಲ್ಲಿ ತೆಂಇಗಿನ ಎಣ್ಣೆ ಮಿಲ್ ಒಂದರಲ್ಲಿ ಬೆಂಕಿ ಅವಘಢ ಸಂಭವಿಸಿ ಅಪಾರ ನಷ್ಟವಾದ ಘಟನೆ ತಡರಾತ್ರಿ ಸಂಭವಿಸಿದೆ.
ಶ್ರೀ ಮಧುಮಾಯ ಆಯಿಲ್ಸ್(ಮಧು) ಫ್ಯಾಕ್ಟರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕುಂದಾಪುರ, ಬೈಂದೂರು ಹಾಗೂ ಹೊಸಂಗಡಿ ಕೆಪಿಟಿಸಿಎಲ್ ನಿಂದ ತಲಾ ಒಂದೊOದು ವಾಹನಗಳು ಸ್ಥಳಕ್ಕೆ ದೌಡಾಯಿಸಿದೆ. ಸ್ಥಳೀಯರ ಸಹಕಾರದಲ್ಲಿ ರಾತ್ರಿಯಿಂದ ಬೆಳಗ್ಗೆ 9ರ ವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ತೊಡಗಿಸಿಕೊಂಡಿದ್ದಾರೆ. ತೆಂಗಿನೆಣ್ಣೆ ಆದ ಕಾರಣ ಬೆಂಕಿ ತೀವೃತೆ ಜಾಸ್ತಿಯಾಗಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.