ಅಕ್ಕಿಮಿಲ್ ನಲ್ಲಿ ಬಿಸಿನೀರಿಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು
Monday, January 19, 2026
ಉಡುಪಿಯ ಬಂಟಕಲ್ಲು ಸಡಂಬೈಲು ಬಳಿ ಇರುವ ಅಕ್ಕಿ ಮಿಲ್ ನಲ್ಲಿ ಭತ್ತದ ಹೊಟ್ಟು ತೆಗೆಯುವ ವೇಳೆ ಆಕಸ್ಮಿಕವಾಗಿ ಬಿಸಿನೀರಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಬಂಟಕಲ್ಲು ಸಡಂಬೈಲು ನಿವಾಸಿ ರೋಹಿಣಿ ಪುಷ್ಪಲತಾ(53) ಮೃತಪಟ್ಟವರು. ಪುಷ್ಪಲತಾ ಅವರು ತನ್ನ ಗಂಡನ ಮನೆಯಲ್ಲಿರುವ ಅಕ್ಕಿಮಿಲ್ಲಿನಲ್ಲಿ ಕೆಲಸ ಮಾಡಿಕೊಂಡಿದ್ದು, ಡಿ.24ರಂದು ಬಿಸಿ ನೀರಿನಿಂದ ಭತ್ತದ ಹೊಟ್ಟು ತೆಗೆಯುವ ವೇಳೆ ಅಕಸ್ಮಿಕವಾಗಿ ಆಯತಪ್ಪಿ ಬಿಸಿ ನೀರಿಗೆ ಬಿದ್ದಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪುಷ್ಪಲತಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ.18ರಂದು ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.