ನೇಣು ಬಿಗಿದು ಯುವಕ ಆತ್ಮಹತ್ಯೆ
Monday, January 19, 2026
ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದ್ರೆಯ ನಾಗರಕಟ್ಟೆ ಎಂಬಲ್ಲಿ ನಡೆದಿದೆ.
ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ರಸ್ತೆ ಬಳಿ ಕಬ್ಬಿನ ಹಾಲಿನ ಅಂಗಡಿ ನಡೆಸುತ್ತಿದ್ದ ಶ್ರೀನಿವಾಸ್ ಎಂಬುವವರ ಪುತ್ರ ದೀಕ್ಷಿತ್ (35) ಆತ್ಮಹತ್ಯೆ ಮಾಡಿಕೊಂಡವರು. ದುಬೈ ನಲ್ಲಿ ಉದ್ಯೋಗ ಮಾಡಿಕೊಂಡಿದ್ದ ದೀಕ್ಷಿತ್ ಅವರು ಊರಿಗೆ ಹಿಂದಿರುಗಿದ್ದು, ನಾಗರಕಟ್ಟೆಯ ರಿಂಗ್ ರೋಡ್ ಬಳಿ ಹೊಟೇಲ್ ವ್ಯವಹಾರ ಪ್ರಾರಂಭಿಸಲು ಸಿದ್ದತೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಲಗಿದ್ದ ಸಮಯದಲ್ಲಿ ದೀಕ್ಷಿತ್ ಮನೆಯ ಕೋಣೆಯೊಂದರ ಕಿಟಕಿ ಸರಳಿಗೆ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.