ಶಾಸಕ ಸುನಿಲ್ ಕುಮಾರ್ ಜೊತೆಗಿರುವವರೇ ಫೈಬರ್ ಗ್ಯಾಂಗ್ ಸದಸ್ಯರು; ಶುಭದ್ ರಾವ್ ಕಿಡಿ
ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ರಾಜಕೀಯ ಲಾಭಕ್ಕಾಗಿ ಪರಶುರಾಮ ಪ್ರತಿಮೆ ಮಾಡಿದ್ದಲ್ಲದೇ ಮತ್ತೆ ಮತ್ತೆ ಸುಳ್ಳು ಹೇಳುವ ಮೂಲಕ ತಪ್ಪನ್ನು ಮರೆ ಮಾಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶುಭದ ರಾವ್ ಆರೋಪಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಕಳ ಉಮಿಕಲ್ ಬೆಟ್ಟಕ್ಕೆ ಸುನಿಲ್ ಕುಮಾರ್ ಭೇಟಿ ನೀಡಿದ ವೇಳೆ ಉಡುಪಿಯಲ್ಲಿ ಫೈಬರ್ ಗ್ಯಾಂಗ್ ಎಂದು ಲೇವಡಿ ಮಾಡಿದ್ದು, ಸುನೀಲ್ ಕುಮಾರ್ ಅವರದ್ದೇ ಪೈಬರ್ ಗ್ಯಾಂಗ್ ಅವರ ಜೊತೆ ಇರುವವರೇ ಪೈಬರ್ ಗ್ಯಾಂಗ್ ಸದಸ್ಯರು ಎಂದು ಕಿಡಿಕಾರಿದರು.
ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಡೆದ ಕಳ್ಳತನ ಶಾಸಕ ಸುನೀಲ್ ಕುಮಾರ್ ಅವರೇ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸೃಷ್ಟಿಸಿದ ಗಿಮಿಕ್ ಎಂದರು.
ಸುನಿಲ್ ಕುಮಾರ್ ಅವರು ಉಮಿಕಲ್ ಬೆಟ್ಟದಲ್ಲಿ ಸ್ವಚ್ಛ ಮಾಡುವುದಾಗಿ ಹೇಳಿದ್ದಾರೆ. ತಪ್ಪು ಮಾಡಿದವರು ಪ್ರಾಯಶ್ಚಿತ ಕೆಲ್ಸ ಮಾಡಬೇಕು. ತಪ್ಪು ಮಾಡಿದವರೇ ಪಾರ್ಕ್ ಸ್ವಚ್ಛ ಮಾಡುವ ಮೂಲಕ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದರು.
ಪರಶುರಾಮ ಥೀಮ್ ಪಾರ್ಕ್ ನಲ್ಲಿ ಮುಂಬರುವ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದಾಗಿ ಸುನಿಲ್ ಕುಮಾರ್ ಹೇಳುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದವರು ಪರಶುರಾಮ ಮೂರ್ತಿಯ ಅರ್ಧ ಭಾಗದ ಕರ್ಮ ಕಾಂಡವನ್ನು ಮತ್ತೆ ಮತ್ತೆ ನೋಡಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಪರಶುರಾಮ ಮೂರ್ತಿಯ ಅಸಹ್ಯ ನೋಡಲು ಮಾರ್ಗ ಮಾಡಿಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.