-->
🔥🔥 ಧಗಧಗನೇ ಹೊತ್ತಿ ಉರಿದ ಆಲದ ಮರ..🔥🔥 (Video)

🔥🔥 ಧಗಧಗನೇ ಹೊತ್ತಿ ಉರಿದ ಆಲದ ಮರ..🔥🔥 (Video)


ಬೃಹತ್ ಗಾತ್ರದ ಆಲದ ಮರವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಧಗ ಧಗನೇ ಹೊತ್ತಿ ಉರಿದ ಘಟನೆ ಉಡುಪಿ ಜಿಲ್ಲೆಯ ಹಾರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. 


ಇಂದು ಏಕಾಏಕಿ ಆಲದ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಇಡೀ ಆಲದ ಮರಕ್ಕೆ ವಿಸ್ತರಿಸಿದೆ. ಕೂಡಲೇ ಉಡುಪಿ ಅಗ್ನಿಶಾಮಕ ಠಾಣೆಗೆ ಸ್ಥಳೀಯರಾದ ಗಣೇಶ್ ಶೆಟ್ಟಿ ಅವರು ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಉಡುಪಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಸತೀಶ್, ಸುಧೀರ್, ಅಮರ್ ಕಟ್ಟಿ, ಶಭಾಜ್ ಖಾನ್ ಅವರೊಂದಿಗೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.





Ads on article

Advertise in articles 1

advertising articles 2

Advertise under the article