ದೇಶದ ಐಕ್ಯತೆ, ಸಮಗ್ರತೆ ದ್ವೇಷ ಭಾಷಣ ಮಸೂದೆ ಉದ್ದೇಶ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Video)
Monday, January 26, 2026
ದೇಶದ ಐಕ್ಯತೆ ಸಮಗ್ರತೆಗಾಗಿ ಸಂವಿಧಾನದ ಆಶಯದಂತೆ ದ್ವೇಷ ಭಾಷಣ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದ್ವೇಷ ಭಾಷಣ ವಿರುದ್ಧ ಕಾನೂನು ರೀತಿಯಲ್ಲಿ ಮಸೂದೆ ತರಲಾಗಿದೆ. ಜನರು ಒಟ್ಟಿಗೆ ಇರಬೇಕಾದರೆ ಜಾತಿ, ಸ್ಥಳ, ಭಾಷೆ, ವ್ಯಕ್ತಿತ್ವಗಳನ್ನು ನಿಂದಿಸಬಾರದು. ದೇಶದ ಸಂವಿಧಾನಕ್ಕೆ ಧಕ್ಕೆ ಬರಬಾರದು ಎಂಬುವುದು ಮಾತ್ರ ನಮ್ಮ ಉದ್ದೇಶ. ಕಾಂಗ್ರೆಸ್ಸಿಗರು ಯಾರಾದರೂ ದ್ವೇಷ ಭಾಷಣ ಮಾಡಿದರೆ ಅವರ ಮೇಲೂ ಕಾನೂನು ಜಾರಿಯಾಗುತ್ತದೆ ಎಂದರು. ಮಸೂದೆ ಜಾರಿಯಾಗುವ ಮೊದಲೇ ನೋಟೀಸ್ ನೀಡಲಾಗಿದೆ ಎನ್ನುವ ಆರೋಪದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ನೋಟೀಸ್ ಕೊಟ್ಟಿರುವ ವಿಚಾರ ನನಗೆ ತಿಳಿದಿಲ್ಲ. ದ್ವೇಷ ಭಾಷಣದ ಹಿನ್ನೆಲೆ ನೋಡಿ ನೋಟೀಸ್ ಕೊಟ್ಟಿರಬಹುದು ಎಂದರು.