-->
 ಕಾಪಿರೈಟ್ ಕದನ; ತಮ್ಮದೇ 130 ಹಾಡುಗಳ ಹಕ್ಕು ಕಳೆದುಕೊಂಡ ಇಳಯರಾಜ

ಕಾಪಿರೈಟ್ ಕದನ; ತಮ್ಮದೇ 130 ಹಾಡುಗಳ ಹಕ್ಕು ಕಳೆದುಕೊಂಡ ಇಳಯರಾಜ


ಇಳಯರಾಜ ಅವರ ಹಳೆಯ ಚಿತ್ರದ ಹಿಟ್ ಹಾಡುಗಳ ಒಂದು ಸಣ್ಣ ತುಣಕನ್ನು ಬಳಸಿದರೂ ಅವರ ಮೇಲೆ ಕಾಫಿರೈಟ್ ಕೇಸ್ ಹಾಕುತ್ತಿದ್ದ ಸಂಗೀತ ಮಾಂತ್ರಿಕ ಇಳೆಯರಾಜ ಅವರಿಗೆ ಇದೀಗ ಅದೇ ಕಾಫಿರೈಟ್ ಅಸ್ತ್ರ ತಿರುಗುಬಾಣವಾಗಿದೆ. ತಾವೇ ಕಂಪೋಸ್ ಮಾಡಿ 130 ಚಿತ್ರಗಳ ಹಾಡನ್ನು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ ಹೊರಡಿಸಿದೆ. 

ದೇಶದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ, ನೂರಾರು ಹಿಟ್ ಹಾಡುಗಳನ್ನು ನೀಡಿರುವ ಇಳಯರಾಜ ಇತ್ತೀಚೆಗೆ ತಮ್ಮ ಹಳೆಯ ಸಿನೆಮಾದ ಹಾಡುಗಳನ್ನು ಯಾರಾದರೂ ತಮ್ಮ ಸಿನೆಮಾದಲ್ಲಿ ಬಳಸಿದರೆ ಕಾಫಿರೈಟ್ ಕೇಸ್ ಹಾಕಿ ಹಣ ವಸೂಲಿ ಮಾಡುತ್ತಿದ್ದರು.

ಇಳಯರಾಜ, ವಿರುದ್ಧ ಖ್ಯಾತ ಸಂಗೀತ ಸಂಸ್ಥೆ ಸಾರೆಗಾಮ ದೆಹಲಿ ಹೈಕೋರ್ಟ್ನಲ್ಲಿ ದಾವೆ ಹೂಡಿತ್ತು. ತಮ್ಮ ಒಡೆತನದಲ್ಲಿರುವ ಹಾಡುಗಳನ್ನು ಇಳಯರಾಜ ಅವರು ಅಮೆಜಾನ್ ಮ್ಯೂಸಿಕ್ಸ್, ಐಟ್ಯೂನ್ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳಿಗೆ ಹಾಗೂ ಕೆಲವು ನಿರ್ಮಾಣ ಸಂಸ್ಥೆಗಳಿಗೆ ಮಾರಾಟ ಮಾಡಿದ್ದಾರೆ ಎಂದು ಸಾರೆಗಾಮ ದೂರು ದಾಖಲಿಸಿತ್ತು. ಸಾರೆಗಾಮದ ದೂರಿನ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಇಳಯರಾಜ ಅವರು ಸಾರೆಗಾಮದ ಒಡೆತನದಲ್ಲಿರುವ 130 ಸಿನಿಮಾಗಳ ಹಾಡುಗಳ ಮೇಲೆ ಹಕ್ಕು ಹೊಂದಿರುವುದಿಲ್ಲ ಎಂದು ಆದೇಶ ನೀಡಿದೆ. ಮಾತ್ರವಲ್ಲದೆ ಯಾವುದೇ ಸಿನಿಮಾದ ಸಂಗೀತಕ್ಕೆ ಆ ಸಿನಿಮಾದ ನಿರ್ಮಾಪಕನೇ ಮೊದಲ ಹಕ್ಕುದಾರ ಆಗಿರುತ್ತಾನೆ, ಆತನಿಂದ ಹಕ್ಕು ಪಡೆದ ಸಂಗೀತ ಸಂಸ್ಥೆಗಳು ಸಹ ಹಕ್ಕುದಾರರಾಗಿರುತ್ತವೆ. ಒಂದೊಮ್ಮೆ ಒಪ್ಪಂದ ಬೇರೆ ರೀತಿಯಲ್ಲಿ ಆಗಿದ್ದರೆ ಮಾತ್ರವೇ ಬೇರೆಯವರು ಹಕ್ಕುದಾರರಾಗಿರುತ್ತಾರೆ ಎಂದಿದೆ ನ್ಯಾಯಾಲಯ. ತಮಿಳು, ಹಿಂದಿ, ತೆಲುಗು, ಕನ್ನಡ, ಮಲಯಾಳಂನ 130 ಸಿನಿಮಾಗಳ ಮೇಲಿನ ಹಕ್ಕುಗಳನ್ನು ಇಳಯರಾಜ ಕಳೆದುಕೊಂಡOತಾಗಿದೆ.

ಇಳಯರಾಜ ಅವರು ಸಿನಿಮಾ ಹಾಡುಗಳನ್ನು ವಿವಿದ ಥರ್ಡ್ ಪಾರ್ಟಿ ಸಂಗೀತ ಅಪ್ಲಿಕೇಶನ್‌ಗಳಿಗೆ ತಮ್ಮ ಟೈಟಲ್‌ನ ಅಡಿಯಲ್ಲಿ ಹಾಡುಗಳನ್ನು ಮಾರಾಟ ಮಾಡಿದ್ದರು. ಆದರೆ ಈಗ ಸಾರೆಗಾಮದ ಕೇಸಿನಿಂದಾಗಿ ಇಳಯರಾಜ ಅವರು ಹಲವು ಹಾಡುಗಳ ಹಕ್ಕುಗಳನ್ನು ಕಳೆದುಕೊಂಡOತಾಗಿದೆ. 

ಇಳಯರಾಜ ಅವರು ಕಳೆದ ಕೆಲ ವರ್ಷಗಳಿಂದ ಹಲವಾರು ಸಿನಿಮಾಗಳು, ಗಾಯಕರುಗಳ ವಿರುದ್ಧ ಕಾಪಿರೈಟ್ ಪ್ರಕರಣಗಳನ್ನು ದಾಖಲಿಸುತ್ತಲೇ ಬಂದಿದ್ದಾರೆ. ತಮ್ಮ ಆತ್ಮೀಯ ಗೆಳೆಯ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಸಹ ತಮ್ಮ ನಿರ್ದೇಶನದ ಹಾಡುಗಳನ್ನು ಲೈವ್ ಶೋನಲ್ಲಿ ಹಾಡದಂತೆ ನೊಟೀಸ್ ನೀಡಿದ್ದರು. ಇತ್ತೀಚೆಗೆ ‘ಮಂಜ್ಞುಮೆಲ್ ಬಾಯ್ಸ್’, ‘ಡ್ಯೂಡ್’, ‘ಗುಡ್ ಬ್ಯಾಡ್ ಅಗ್ಲಿ’ ಇನ್ನೂ ಕೆಲವಾರು ಸಿನಿಮಾಗಳ ಮೇಲೆ ಕೇಸು ಹೂಡಿದ್ದಾರೆ. ಸೋನಿ ಮ್ಯೂಸಿಕ್, ಅಮೆಜಾನ್ ಮ್ಯೂಸಿಕ್, ಸಾರೆಗಾಮ ಇನ್ನೂ ಕೆಲವು ಸಂಸ್ಥೆಗಳ ಮೇಲೂ ಸಹ ಇಳಯರಾಜ ಅವರು ಕೇಸು ದಾಖಲಿಸಿದ್ದಾರೆ.



Ads on article

Advertise in articles 1

advertising articles 2

Advertise under the article