-->
 ಕೋಮುವಾದದಿಂದ ದ.ಕ ಜಿಲ್ಲೆಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಪ್ರಿಯಾಂಕ ಖರ್ಗೆಗೆ ಮೋಹನ್ ದಾಸ್ ಪೈ ತಿರುಗೇಟು

ಕೋಮುವಾದದಿಂದ ದ.ಕ ಜಿಲ್ಲೆಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಪ್ರಿಯಾಂಕ ಖರ್ಗೆಗೆ ಮೋಹನ್ ದಾಸ್ ಪೈ ತಿರುಗೇಟು


ಕೋಮುವಾದದಿಂದ ದಕ್ಷಿಣಕನ್ನಡ ಜಿಲ್ಲೆಗೆ ಹೂಡಿಕೆದಾರರು ಆಗಮಿಸುತ್ತಿಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕರಾವಳಿ ಮೂಲದ ಉದ್ಯಮಿ ಮೋಹನ್ ದಾಸ್ ಪೈ ತಿರುಗೇಟು ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊOಡಿರುವ ಮೋಹನ್ ದಾಸ್ ಪೈ ಅವರು, ಇದೊಂದು ದೊಡ್ಡ ಸುಳ್ಳು ಮತ್ತು ಕೆಟ್ಟ ಜೋಕ್ ಎಂದು ಟೀಕಿಸಿದ್ದಾರೆ. 

ಬೆಂಗಳೂರು ಹೊರತುಪಡಿಸಿದರೆ ಎರಡನೇ ದೊಡ್ಡ ಆದಾಯದ ಮೂಲ ದಕ್ಷಿಣ ಕನ್ನಡ. 30,000 ಹೆಚ್ಚಿನ ವಿದ್ಯಾರ್ಥಿಗಳು ಬೇರೆ ರಾಜ್ಯ, ನಗರದಿಂದ ವೈದ್ಯಕೀಯ ಎಂಜಿನಿಯರಿOಗ್ ಕಲಿಯಲು ಇಲ್ಲಿಗೆ ಬರುತ್ತಾರೆ. ನೀವು ಹೇಳಿದ್ದೆ ಸರಿಯಾಗಿದ್ದರೆ ಯಾಕೆ ಹೆತ್ತವರು ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಕಳಿಸುತ್ತಿದ್ರು ಎಂದು ಖರ್ಗೆಗೆ ಉದ್ಯಮಿ ಪೈ ಪ್ರಶ್ನಿಸಿದ್ದಾರೆ.

ಸಚಿವರಾಗಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನೀವು ನಮ್ಮನ್ನು ಅತ್ಯಂತ ತುಚ್ಛವಾಗಿ ನೋಡಿದ್ದೀರಿ ಎಂದು ಪೈ ಕಿಡಿಕಾರಿದ್ದಾರೆ. ಇದಕ್ಕೆ ಮತ್ತೆ ಎಕ್ಸ್ನಲ್ಲಿ ಖರ್ಗೆ ತಿರುಗೇಟು ಕೊಟ್ಟಿದ್ದು, ಸಮಸ್ಯೆಗಳ ಬಗ್ಗೆ ಕುರುಡಾಗಿದ್ದರೆ ಹೀಗೆಯೇ ಆಗುತ್ತೆ. ರಾಜ್ಯದ 40% ಜಿಡಿಪಿಯನ್ನು ಬೆಂಗಳೂರು ಕೊಡುತ್ತೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡ 5.4% ಅನ್ನು ಕೊಡುಗೆ ಕೊಡುತ್ತೆ. ಇದರಲ್ಲಿಯೇ ವ್ಯತ್ಯಾಸ ತಿಳಿಯೋದಿಲ್ವೇ? ನಾನು ಹೇಳೋದು ಸುಳ್ಳಾಗಿದ್ರೆ ಅಲ್ಲಿನ ಸ್ಥಳೀಯ ಕಾಮರ್ಸ್ ವಿಭಾಗ ಈ ಬಗ್ಗೆ ಚರ್ಚೆ ಯಾಕೆ ಮಾಡುತ್ತೆ? ನಮ್ಮ ಸರ್ಕಾರ ಕರಾವಳಿ ಅಭಿವೃದ್ಧಿಯ ಬಗ್ಗೆ ಜವಾಬ್ದಾರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article