-->
 ಚಂದ್ರಗ್ರಹಣದ ಹಿನ್ನೆಲೆ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾ.2 ಮತ್ತು 3ರಂದು ಸೇವೆಯಲ್ಲಿ ವ್ಯತ್ಯಯ

ಚಂದ್ರಗ್ರಹಣದ ಹಿನ್ನೆಲೆ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾ.2 ಮತ್ತು 3ರಂದು ಸೇವೆಯಲ್ಲಿ ವ್ಯತ್ಯಯ


ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್ 2 ಮತ್ತು 3ರಂದು ದೇವರ ದರ್ಶನ ಹಾಗೂ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

ಮಾರ್ಚ್ 2 ಮತ್ತು 3ರಂದು ಸರ್ಪಸಂಸ್ಕಾರ ಪೂಜೆ ನಡೆಯುವುದಿಲ್ಲ. 3ರಂದು ಯಾವುದೇ ಸೇವೆಗಳು ಇರುವುದಿಲ್ಲ. ಅಂದು ಮಧ್ಯಾಹ್ನದ ಮಹಾಪೂಜೆ ಬೆಳಿಗ್ಗೆ 8ಕ್ಕೆ ನಡೆಯಲಿದೆ. 9 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬೆಳಿಗ್ಗೆಯ ಉಪಾಹಾರ 9 ಗಂಟೆವರೆಗೆ ಸಿಗಲಿದೆ. ಮಧ್ಯಾಹ್ನ ಭೋಜನ ವ್ಯವಸ್ಥೆ ಇರುವುದಿಲ್ಲ. ಸಂಜೆ 7ರ ನಂತರ ದೇವರ ಮಹಾಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.




Ads on article

Advertise in articles 1

advertising articles 2

Advertise under the article