ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ತಿಕ್ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ
Wednesday, February 25, 2026
ಪಾಂಡೇಶ್ವರ ಅಗ್ನಿಶಾಮಕ ದಳದ ದಕ್ಷ ಹಾಗೂ ಪ್ರಾಮಾಣಿಕ ಸಿಬ್ಬಂದಿ ಕಾರ್ತಿಕ್ ಅವರಿಗೆ 2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿ ಅವರ ಚಿನ್ನದ ಪದಕ ಲಭಿಸಿದೆ.
ಮಂಗಳೂರು ಕುಂಪಲ ನಿವಾಸಿಯಾಗಿರುವ ಇವರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತುತುರ್ತು ಸೇವೆಗಳ ಹುದ್ದೆಗೆ 2008ರಲ್ಲಿ ಸೇರ್ಪಡೆಗೊಂಡು ತರಬೇತಿಯನ್ನು ಬೆಂಗಳೂರಿನಲ್ಲಿ ಪಡೆದಿದ್ದರು. ಬಳಿಕ ಮಡಿಕೇರಿ, ಗೋಣಿಕೊಪ್ಪ, ಉಡುಪಿ, ಬೆಳ್ತಂಗಡಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಪಾಂಡೇಶ್ವರ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಕಾರ್ತಿಕ್ ಅವರ 18 ವರ್ಷಗಳ ಸೇವೆಯನ್ನು ಗುರುತಿಸಿ ಅನೇಕ ನಗದು ಬಹುಮಾನಗಳು ಲಭಿಸಿದೆ ಇವರ ದಕ್ಷ ಮತ್ತು ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ 2025 ನೇ ಸಾಲಿನ ಮುಖ್ಯಮಂತ್ರಿ ಅವರ ಚಿನ್ನದ ಪದಕ ಲಭಿಸಿದೆ.