ಶ್ರವಣದೋಷವಿರುವ ವಿದ್ಯಾರ್ಥಿನಿಯ ಕಷ್ಟಕ್ಕೆ ಲೇಖಕಿ ನೇಮಿಚಂದ್ರ ಅವರಿಂದ ಮಾನವೀಯ ಸ್ಪಂದನೆ
Friday, February 27, 2026
ಉಡುಪಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ವತಿಯಿಂದ ಪ್ರಥಮ ಪಿ.ಯು.ಸಿ. ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಜೀವನ ವಿದ್ಯಾ ಸನಿವಾಸ ಶಿಬಿರದಲ್ಲಿ ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ.
ವಿದ್ಯಾಪೋಷಕ್ ದಾನಿ ಹಾಗೂ ಖ್ಯಾತ ಲೇಖಕಿ ಬೆಂಗಳೂರಿನ ನೇಮಿಚಂದ್ರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಶಿಬಿರಾರ್ಥಿಗಳಿಗೆ ತಮ್ಮ ಅಪೂರ್ವ ಜೀವನಾನುಭವಗಳನ್ನು ಹಂಚಿಕೊAಡರು. ಬಳಿಕ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮಗ್ರ ಹಾಗೂ ಉಪಯುಕ್ತ ಮಾಹಿತಿ ನೀಡಿದರು.
ಯಾವುದೇ ಆರ್ಥಿಕ ಪ್ರತಿಫಲದ ನಿರೀಕ್ಷೆಯಿಲ್ಲದೆ, ಸ್ವಂತ ಖರ್ಚಿನಲ್ಲಿ ದೂರದ ಬೆಂಗಳೂರಿನಿAದ ಆಗಮಿಸಿದ ಅವರು ಎರಡು ದಿನಗಳ ಕಾಲ ಶಿಬಿರದಲ್ಲೇ ತಂಗಿ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆತರು. ರಾತ್ರಿ ಊಟದ ಬಳಿಕ ಶಿಬಿರಾರ್ಥಿಗಳು ಹಂಚಿಕೊAಡ ಸ್ವಕಥನಗಳನ್ನು ಮಧ್ಯರಾತ್ರಿ 12 ಗಂಟೆಯವರೆಗೂ ಕುಳಿತು ಆಲಿಸಿದ ಅವರು, ಶ್ರವಣ ತೊಂದರೆಯಿAದ ಬಳಲುತ್ತಿದ್ದ ರಾಜೇಶ್ವರಿ ಎಂಬ ವಿದ್ಯಾರ್ಥಿನಿಗೆ ಶ್ರವಣ ಸಾಧನ ಒದಗಿಸಲು ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿ ಮಾನವೀಯ ಸ್ಪಂದನೆ ಮೆರೆದರು.
ಫೆಬ್ರವರಿ 23ರಂದು ತಾವೇ ಪ್ರಾಯೋಜಿಸಿದ್ದ ಮನೆಯ ಉದ್ಘಾಟನೆ ಕಾರ್ಯಕ್ರಮದ ನಿಮಿತ್ತ ಉಡುಪಿಗೆ ಆಗಮಿಸಿದ್ದ ಬೆಂಗಳೂರಿನ ಎಸ್. ವೆಂಕಟೇಶ ನಂದಾ ವೆಂಕಟೇಶ ದಂಪತಿಗಳೂ ಶಿಬಿರದಲ್ಲಿ ಎರಡು ದಿನಗಳ ಕಾಲ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅವರ ಸ್ವಕಥನಗಳನ್ನು ಆಲಿಸಿ, ಮನೋವೈಕಲ್ಯ ಅನುಭವಿಸುತ್ತಿದ್ದವರಿಗೆ ಸಾಂತ್ವನ ಹೇಳಿದರು.
