-->
 ನಿಷೇಧಿತ ಮಾದಕ ವಸ್ತು ಮಾರಾಟ; ಮೂವರು ಆರೋಪಿಗಳ ಬಂಧನ

ನಿಷೇಧಿತ ಮಾದಕ ವಸ್ತು ಮಾರಾಟ; ಮೂವರು ಆರೋಪಿಗಳ ಬಂಧನ


ಬೆOಗಳೂರಿನಿOದ ನಿಷೇದಿತ ಮಾದಕ ವಸ್ತು ಎಂಡಿಎOಎ ಖರೀದಿಸಿ ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉಳ್ಳಾಲ ತಾಲೂಕಿನ ತಲಪಾಡಿಯ ಪರಿಸರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಫೆ. 12 ರಂದು ಎಂಡಿಎOಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಕಾರನ್ನು ಪತ್ತೆ ಹಚ್ಚಿ, ಆರೋಪಿಗಳಾದ ಉಳ್ಳಾಲ ಗಣೇಶ್ ಬೀಡಿ ವರ್ಕ್ಸ್ ಹತ್ತಿರದ ಬಸ್ತಿಪಡ್ಪು ನಿವಾಸಿ ಮುಸ್ತಫಾ ಸೀದಿಯಬ್ಬ(34), ಉಳ್ಳಾಲ, ಕೋಡಿ ಡಿ ರೋಡ್ ನಿವಾಸಿ ಮೈಯದ್ದಿ(28), ಉಳ್ಳಾಲದ ಮುಕ್ಕಚೇರಿ ಮೊಹಮ್ಮದ್ ಕಂಪೌOಡು ನಿವಾಸಿ ಮೊಹಮ್ಮದ್ ಶಿಫಾನ್(28) ಎಂಬವರನ್ನು ಬಂಧಿಸಿದ್ದಾರೆ.

11,90,000 ರೂ. ಮೌಲ್ಯದ 118.13 ಗ್ರಾಂ ತೂಕದ ಎಂಡಿಎOಎ, ಮೊಬೈಲ್ ಫೋನ್-4, ಸ್ವೀಪ್ಟ್ ಕಾರು ಸಹಿತ ಒಟ್ಟು 17,95,000 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿ ಮುಸ್ತಫಾ ಸೀದಿಯಬ್ಬ ಎಂಬಾತನ ಮೇಲೆ ಈ ಹಿಂದೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ಮತ್ತು ಮೈಯದ್ದಿ ಎಂಬಾತನ ಮೇಲೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.

ಈ ಮಾದಕವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಈ ಮಾದಕ ವಸ್ತು ಎಂಡಿಎOಎ ಮಾರಾಟ/ಸಾಗಾಟದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.






Ads on article

Advertise in articles 1

advertising articles 2

Advertise under the article