ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶಿವರಾತ್ರಿ ಆಚರಣೆ
Monday, February 16, 2026
ಶಿವರಾತ್ರಿ ಜಾಗರಣೆಯ ಪ್ರಯುಕ್ತ ಪರ್ಯಾಯ ಶೀರೂರು ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎಳ್ಳು ಗಂಟು ದೀಪವನ್ನು ಉರಿಸಿ ದೇಶದ ಸಮಸ್ತ ಲೋಕಕ್ಕೆ ಬರುವ ಕಂಟಕಗಳು ನಾಶವಾಗಲಿ ಎಂದು ಪ್ರಾರ್ಥಿಸಿದರು. ಅಶ್ವಥ್ ಭಾರದ್ವಾಜ್ ಇವರು ರಂಗೋಲಿ ಬಿಡಿಸುವಲ್ಲಿ ಸಹಕರಿಸಿದರು.
ಹೆರ್ಗ ರವೀಂದ್ರ ಭಟ್ ಹಾಗೂ ಕಲ್ಯ ಅಶೋಕ ಆಚಾರ್ಯ ಶಿವರಾತ್ರಿ ಯ ಮಹಿಮೆ ಹಾಗೂ ಶಿವರಾತ್ರಿಯ ಆಚರಣೆಯ ಮಹತ್ವಗಳ ಬಗ್ಗೆ ಪ್ರವಚನ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷಿತಿಜ ಬೆಂಗಳೂರು ಹಾಗೂ ಬಳಗದವರಿಂದ ಯಕ್ಷಗಾನ ಭರತನಾಟ್ಯ ಡ್ಯುಯೆಟ್ , ಮಧೂರು ಬಾಲಸುಬ್ರಮಣ್ಯಂ ಹಾಗೂ ಬಳಗದವರಿಂದ ಸಂಗೀತ ಕಾರ್ಯಕ್ರಮ ಶ್ರೀಕಾಂತ್ ನಾಯಕ್ ಹಾಗೂ ತಂಡದಿOದ ಭಜನಾ ಕಾರ್ಯಕ್ರಮ ನಡೆಯಿತು.
ಸಂಘ ಸಂಸ್ಥೆಗಳ ಸದಸ್ಯರಿಂದ ರುದ್ರ ಪಾರಾಯಣ ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು. ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷರಾದ ಸಂದೀಪ್ ಮಂಜ ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ರಘುಪತಿ ರಾಯರು ಹಾಗೂ ಮಾಜೀ ಅಧ್ಯಕ್ಷರಾದ ವಿಷ್ಣು ಪಾಡಿಗಾರ್ ಹಾಗೂ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಸದಸ್ಯರು ಹಾಗೂ ಸದಸ್ಯೆಯರು ತು ಶಿ ಮಾ ದ ಅಧ್ಯಕ್ಷರಾದ ಜಯರಾಮ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಶೀರೂರು ಮಠದ ವಿದ್ವಾಂಸರಾದ ಸುದರ್ಶನ್ ಆಚಾರ್ಯ ಹಾಗೂ ಸಗ್ರಿ ಆನಂದತೀರ್ಥ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.


.jpeg)
.jpeg)


