-->
ಗಾಂಜಾ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಗಾಂಜಾ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ


ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 145/2025  ಕಲಂ: 8(c),20(b), 22(b) NDPS ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. 

ಕೇರಳ ರಾಜ್ಯದ ಚಕ್ಕಿಂಗಿಂಲ್‌ ತೋಡಿ ಹೌಸ್‌ ನಿವಾಸಿ ಮೊಹಮ್ಮದ್‌ ಅಜ್ಮಲ್‌ ಬಂಧಿತ ಆರೋಪಿ.2025 ರ ಆಗಸ್ಟ್ 16 ರಂದು  ಹೆರ್ಗಾ  ಗ್ರಾಮದ ಈಶ್ವರ ನಗರ ನರಸಿಂಗೆ ದೇವಸ್ಥಾನದ ರಸ್ತೆಯ ಮಣಿಪಾಲ ಆಟೋ ಬಾರ್‌ ಬಿಲ್ಡಿಂಗ್‌ನ ಮೊದಲನೆ ಮಹಡಿಯಲ್ಲಿ ಇರುವ ರೂಮ್‌  ನಂ 03 ರಲ್ಲಿ ಗಾಂಜಾ ಮಾರಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ  ಮಣಿಪಾಲ ಪೊಲೀಸ್‌ ನಿರೀಕ್ಷಕರಾದ ಮಹೇಶ್‌ ಪ್ರಸಾದ್‌ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆಪ್ಶಿನ್‌ ಮತ್ತು ಶಿವನಿಧಿ ಆಚಾರ್ಯ  ಹಾಗೂ ಮನೀಶ್ ಎಂಬವರನ್ನು ಬಂಧಿಸಲಾಗಿತ್ತು.  ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 4ನೇ ಆರೋಪಿತ  ಮೊಹಮ್ಮದ್‌ ಅಜ್ಮಲ್‌ ನನ್ನು ಫೆ. 4ರಂದು ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ ಬಳಿಯ ಮಾಕ್ಸ್‌ ಶೋರೂಂ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ವಶಕ್ಕೆ ಪಡೆದು, ಆತನ ವಶದಲ್ಲಿದ್ದ ಸುಮಾರು 1 ಲಕ್ಷ ಮೌಲ್ಯದ 2084 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. 


Ads on article

Advertise in articles 1

advertising articles 2

Advertise under the article