ನಿಷೇಧಾಜ್ಞೆ ನಡುವೆಯೇ ಕಂಬಳ ಕರೆಗೆ ಗುದ್ದಲಿಪೂಜೆ
Saturday, February 28, 2026
ಜಿಲ್ಲಾಡಳಿತದ ನಿಷೇಧಾಜ್ಞೆಯ ನಡುವೆಯೂ ಉಡುಪಿಯ 80ಬಡಗುಬೆಟ್ಟುವಿನಲ್ಲಿ ಕಂಬಳಕರೆಗೆ ಶಂಕುಸ್ಥಾಪನೆ ನೆರವೇರಿತು.
ಬಡಗುಬೆಟ್ಟುವಿನಲ್ಲಿ ಇಂದು(ಫೆ.28) ಬಿಜೆಪಿ ಮುಖಂಡ ಶುಭಕರ ಶೆಟ್ಟಿ ನೇತೃತ್ವದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಕಂಬಳ ಕರೆಗೆ ಶಂಕುಸ್ಥಾಪನೆ ನೆರವೇರಿತು. ಜಿಲ್ಲಾಡಳಿತ ಕಾರ್ಯಕ್ರಮವನ್ನು ಮಾರ್ಚ್ 4ರಂದು ಆಯೋಜಿಸಿದ್ದು, ಇಂದು ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಗುದ್ದಲಿ ಪೂಜೆ ನೆರವೇರಿಸಲು ನಿರ್ಧರಿಸಿರುವುದರಿಂದ ಗೊಂದಲ ಏರ್ಪಟ್ಟಿತ್ತು. ಹೀಗಾಗಿ ಇಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ಗಂಟೆ ವರೆಗೆ ಮಣಿಪಾಲ ಠಾಣಾ ವ್ಯಾಪ್ತಿಯ 80ಬಡಗುಬೆಟ್ಟು ಗ್ರಾಮದ ಸ.ನ 11/1ರ ಯುವಜನ ಮತ್ತು ಕ್ರೀಡಾ ಇಲಾಖೆ ಹಾಗು ಜಿಲ್ಲಾಡಳಿತಕ್ಕೆ ಕಾಯ್ದಿರಿಸಿದ 6.30 ಎಕರೆ ಜಾಗದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ನಿಷೇಧಾಜ್ಞೆ ನಡುವೆಯೇ ಗುದ್ದಲಿ ಪೂಜೆ ನೆರವೇರಿಸಲಾಯಿತು.ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.