-->
 ನಕ್ಸಲ್ ಪರ ಕರಪತ್ರಿಕೆ ಹಂಚಿಕೆ ಪ್ರಕರಣ: ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ಕೋರ್ಟಿಗೆ ಹಾಜರು

ನಕ್ಸಲ್ ಪರ ಕರಪತ್ರಿಕೆ ಹಂಚಿಕೆ ಪ್ರಕರಣ: ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ಕೋರ್ಟಿಗೆ ಹಾಜರು


ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದಲ್ಲಿ 2012ರಲ್ಲಿ ನಕ್ಸಲ್ ಪರ ಕರಪತ್ರ ಹಂಚಿದ ಪ್ರಕರಣಕ್ಕೆ ಸಂಬOಧಿಸಿ ನಕ್ಸಲ್ ಮಹೇಶ್ ಅವರನ್ನು ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಕೇರಳದ ತ್ರಿಶೂರ್ ಜೈಲಿನಲ್ಲಿ ಬಂಧನದಲ್ಲಿದ್ದ ಮಹೇಶ್ ಅವರನ್ನು ಕೇರಳ ರಾಜ್ಯದ ಪೊಲೀಸರು ಬಿಗಿ ಭದ್ರತೆಯೊಂದಿಗೆ ಫೆ. 19ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ ಮಹೇಶ್ ಮೂಲತಃ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮದ ಕುಡುಡಿ ಮುಖ್ಯರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕರ್ ಕಾಲನಿಯ ನಿವಾಸಿಯಾಗಿದ್ದು, ಮಹೇಶ್ ಅಲಿಯಾಸ್ ಜಯಣ್ಣ ಅಲಿಯಾಸ್ ಜಾನ್ ಅಲಿಯಾಸ್ ಮಾರಪ್ಪ ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದಾರೆ.

ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012ರಲ್ಲಿ ನಕ್ಸಲ್ ಪರವಾದ ಕರಪತ್ರಗಳನ್ನು ಹಂಚಿದ ಪ್ರಕರಣಕ್ಕೆ ಸಂಬOಧಿಸಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳೆದ ಆರು ತಿಂಗಳಿOದ ಅವರು ಕೇರಳದ ಜೈಲಿನಲ್ಲಿ ಬಂಧನದಲ್ಲಿದ್ದಾರೆ.

ಕರ್ನಾಟಕದ ನಕ್ಸಲ್ ಮುಖಂಡರೊOದಿಗೆ ಮಹೇಶ್ ಕೂಡ ರಾಜ್ಯದ ಮುಖ್ಯಮಂತ್ರಿಗಳ ಮುಂದೆ ಶರಣಾಗತಿಯಾಗಿದ್ದರು.


Ads on article

Advertise in articles 1

advertising articles 2

Advertise under the article