-->
 ಪಾದಚಾರಿ ಮೇಲೆ ಹರಿದ ಕ್ರೇನ್; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ(Video)

ಪಾದಚಾರಿ ಮೇಲೆ ಹರಿದ ಕ್ರೇನ್; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ(Video)


ಉಡುಪಿಯ ಪೆರಂಪಳ್ಳಿಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮೇಲೆ ಕ್ರೇನ್ ಹರಿದ ಭಯಾನಕ ವೀಡಿಯೊವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೆರಂಪಳ್ಳಿಯಲ್ಲಿರುವ ಹೆರ್ಗಾ ವ್ಯವಸಾಯ ಸೇವಾ ಸೊಸೈಟಿಯ ಮುಂಭಾಗ ಈ ಘಟನೆ ನಡೆದಿದ್ದು, ಕ್ರೇನ್ ಚಾಲಕ ವಾಹನವನ್ನು ತಿರುಗಿಸಿ, ಮುಂದೆ ಬರುತ್ತಿದ್ದ ಕಾರಿಗೆ ದಾರಿ ಮಾಡಿಕೊಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮೇಲೆ ಕ್ರೇನ್ ಹರಿದಿದೆ. ಕ್ರೇನ್‌ನ ಚಕ್ರದ ಕೆಳಗೆ ಸಿಲುಕಿಕೊಂಡಿದ್ದ ಆ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತ ನಡೆದ ನಂತರ ಕ್ರೇನ್ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ ತಿಳಿದು ಬಂದಿದೆ. 





 

Ads on article

Advertise in articles 1

advertising articles 2

Advertise under the article