-->
 ಏತ ನೀರಾವರಿ ಯೋಜನೆ; ಜಿಲ್ಲಾ ರೈತ ಸಂಘದ ಸಮಾಲೋಚನೆ ಸಭೆ

ಏತ ನೀರಾವರಿ ಯೋಜನೆ; ಜಿಲ್ಲಾ ರೈತ ಸಂಘದ ಸಮಾಲೋಚನೆ ಸಭೆ


ಉಡುಪಿ ಜಿಲ್ಲಾ ರೈತ ಸಂಘದಿOದ ಸಿದ್ದಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಪ್ರದೇಶ ವೀಕ್ಷಣೆ ಬಳಿಕ ಸಮಾಲೋಚನಾ ಸಭೆಯು ಸಿದ್ದಾಪುರ ಗ್ರಾಪಂ ಸಭಾ ಭವನದಲ್ಲಿ ನಡೆಯಿತು. 


ಯೋಜನೆ ಕುರಿತು ವ್ಯಾಪ್ತಿಯ ರೈತರನ್ನು ಉದ್ದೆಶೀಸಿ ಮಾತನಾಡಿದ ಉಡುಪಿ ಜಿಲ್ಲಾ ರೈತ ಸಂಘ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ, ರೈತರ ಪರವಾಗಿ ರೈತ ಸಂಘದಿOದ ಹೋರಾಟ ಮಾಡುತ್ತಾ ಬಂದಿದ್ದೇವೆ. ರೈತರ ಪರವಾಗಿ ಮಾತನಾಡದೆ ಇದ್ದಲ್ಲಿ ಆತ್ಮವಂಚನೆ ಮಾಡಿದ ಹಾಗಾಗುತ್ತದೆ. ಏತನೀರಾವರಿ ಯೋಜನೆಯಿಂದ ಅವಶ್ಯ ಕತೆವಿರುವ ಕೃಷಿ ಭೂಮಿ ಪ್ರದೇಶಗಳಿಗೆ ನೀರು ದೊರಕುವ ಮೂಲಕ ರೈತರಿಗೆ ನ್ಯಾಯ ಸಿಗಬೇಕು. ನೀರಿಗಾಗಿ ಹೋರಾಟ ಮಾಡುವ ರೈತಾಪಿ ವರ್ಗಕ್ಕೆ ರೈತ ಸಂಘದಿOದ ಸದಾ ಬೆಂಬಲವಿದೆ ಎಂದರು.

ಸಭೆಯಲ್ಲಿ ರೈತ ಸಂಘದ ಮುಂದಿನ ನಡೆ ಕುರಿತು ಚರ್ಚೆ ನಡೆಯಿತು. ಸಭೆಗೂ ಮೊದಲು ಸಿದ್ದಾಪುರ ಏತನೀರಾವರಿ ಯೋಜನೆ ಕಾಮಗಾರಿ ಪ್ರದೇಶ ವೀಕ್ಷಣೆ ನಡೆಯಿತು. 

ಸಭೆಯಲ್ಲಿ ಜಿಲ್ಲಾ ರೈತ ಸಂಘ ಪ್ರಧಾನ ಕಾಠ್ಯದರ್ಶಿ ಸತೀಶ್ ಕಿಣಿ ಬೆಳ್ವೆ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಡಾ.ನಾಗಭೂಷಣ್ ಉಡುಪ ಸಿದ್ದಾಪುರ, ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಗಟ್ಟು ಮಂಜುನಾಥ ಗಿಳಿಯಾರು, ಶೇಖರ್ ಕುಲಾಲ್ ಸಿದ್ದಾಪುರ, ಸದಾನಂದ ಶೆಟ್ಟಿ ಕೆದೂರು, ಶಿವರಾಮ ಶೆಟ್ಟಿ ಜನ್ಸಾಲೆ ಮತ್ತಿತರರು ಮಾತನಾಡಿದರು. ಯೋಜನೆ ವ್ಯಾಪ್ತಿಯ ನಾನಾ ಭಾಗಗಳ ನೂರಾರು ಸಂಖ್ಯೆಯಲ್ಲಿ ರೈತರು ಸಭೆ ಯಲ್ಲಿ ಪಾಲ್ಗೊಂಡಿದ್ದರು. 


Ads on article

Advertise in articles 1

advertising articles 2

Advertise under the article