-->
ವರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ; ಆರೋಪಿಗಳ ಬಂಧನ

ವರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ; ಆರೋಪಿಗಳ ಬಂಧನ


ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಮರತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ 22 ಮಂದಿ  ಅರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಹಳ್ನಾಡು ನಿವಾಸಿ ದೇವಾನಂದ ಶೆಟ್ಟಿ, ಉತ್ತರ ಪ್ರದೇಶದ ಅಮರೇಶ(27), ಕೃಪಾಲ್‌(32),  ಪರಶುರಾಮ(35), ಪ್ರಬೀನ್‌(20), ರಾಮಚರಣ್‌(35), ಸತ್ರೊಹನ್‌ (28),  ರಾಮ ಅವತಾರ್‌ (21), ಬಿಮಲೇಶ್‌(23), ರಾಮಲಾಲ್‌(40), ಬೊಲಾ(23),  ಸಂಜಯ (27), ಹಿರಿದೆ ರಾಮ(27), ಸರ್ವನ್‌(21), ಮುಖೇಶ(24), ಕರಣ್‌(21), ಪ್ರೀನ್ಸ್‌  (19), ಕಿಶುನ್‌(19), ಸುರಾಜ(30), ನೀರಾಜ(22), ಕಲ್ಲು(19), ರಾಜಿವ(26), ಬಂಧಿತ ಆರೋಪಿಗಳು. 

ಪೊಲೀಸ್‌ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಇವರ ಇವರ ಮಾರ್ಗದರ್ಶನದಲ್ಲಿ ಕೋಟ ಠಾಣಾ ಪಿ.ಎಸ್.‌ಐ. ಪ್ರವೀಣ್‌ ಕುಮಾರ್‌ ಆರ್. ‌ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಸುಮಾರು 315 ಯುನಿಟ್‌ ಮರಳು ಅಂದಾಜು ಮೌಲ್ಯ ರೂ 8,50,000 ಹಾಗೂ  ಮರಳು ತೆಗೆಯಲು ಬಳಸಿದ 3,00,000 ಲಕ್ಷ ಮೌಲ್ಯದ 3 ಪೈಬರ್‌ ಬೋಟ್, ಮರಳು ತುಂಬಲು ಬಳಸಿದ ಮರದ ಹಿಡಿ ಇರುವ ಕಬ್ಬಿಣದ ಹಾರೆ- 6, ಫೈಬರ್ ಬುಟ್ಟಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 24/2026  ಕಲಂ: 303 (2) ಜೊತೆಗೆ 3 (5) BNS ACT ಮತ್ತು 4, 4(1A), 21 MMRD ACT ರಂತೆ ಪ್ರಕರಪ್ರಕರಣ ದಾಖಲಿಸಿಕೊಳ್ಳಲಾಗಿದೆ.




Ads on article

Advertise in articles 1

advertising articles 2

Advertise under the article