-->
 ಪ್ರೇಮಿಗಳ ದಿನಾಚರಣೆಗೆ ಕೆಂಪು ಗುಲಾಬಿಗೆ ಭಾರೀ ಡಿಮ್ಯಾಂಡ್

ಪ್ರೇಮಿಗಳ ದಿನಾಚರಣೆಗೆ ಕೆಂಪು ಗುಲಾಬಿಗೆ ಭಾರೀ ಡಿಮ್ಯಾಂಡ್


ಪ್ರೇಮಿಗಳ ದಿನಾಚರಣೆ ಸಮೀಪಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಕೆಂಪು ಗುಲಾಬಿಗೆ ದಾಖಲೆ ಮಟ್ಟದ ಬೇಡಿಕೆ ಸೃಷ್ಟಿಯಾಗಿದೆ. 


ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಗುಲಾಬಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಒಂದು ಗುಲಾಬಿ ಹೂವಿನ ಬೆಲೆ 100 ರೂಪಾಯಿ ತಲುಪಿದೆ. ಸಾಮಾನ್ಯವಾಗಿ ಈ ಹೂವುಗಳು 30 ರಿಂದ 50 ರೂಪಾಯಿಗಳಿಗೆ ಸಿಗುತ್ತಿದ್ದವು, ಆದರೆ ಹಬ್ಬ ಮತ್ತು ಮದುವೆಯ ಸೀಸನ್ ಕಾರಣದಿಂದ ಬೆಲೆ ದುಪ್ಪಟ್ಟಾಗಿದೆ

ಬೆಂಗಳೂರಿನ ಅಂತರಾಷ್ಟ್ರೀಯ ಹೂವಿನ ಹರಾಜು ಕೇಂದ್ರದಲ್ಲಿ ಪ್ರತಿ ಗುಲಾಬಿ ಕಡ್ಡಿಯ ಬೆಲೆಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ. ಕೆಲವು ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದು ಹೂವಿನ ಬೆಲೆ 50 ರಿಂದ 100ರವರೆಗೂ ತಲುಪಿದೆ.  

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಗುಲಾಬಿಗಳಿಗೆ ವಿದೇಶಗಳಲ್ಲೂ ಭಾರಿ ಬೇಡಿಕೆಯಿದ್ದು, ಅಲ್ಲಿನ ರೈತರು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ವಿಶೇಷವಾಗಿ 'ತಾಜ್ ಮಹಲ್' ತಳಿಯ ಕೆಂಪು ಗುಲಾಬಿಗೆ ಅತಿ ಹೆಚ್ಚು ಡಿಮ್ಯಾಂಡ್ ಇದೆ. ಈ ವರ್ಷ ಚಳಿಗಾಲದ ತೀವ್ರತೆಯಿಂದಾಗಿ ಹೂವಿನ ಇಳುವರಿ ಶೇ. 40ರಷ್ಟು ಕಡಿಮೆಯಾಗಿದ್ದು, ಇದು ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.




Ads on article

Advertise in articles 1

advertising articles 2

Advertise under the article