-->
 ಮಾ. 18, 19: ಉಚಿತ ಶ್ರವಣ ತಪಾಸಣೆ, ಸಹಾಯಧನದಲ್ಲಿ ಶ್ರವಣ ಯಂತ್ರ ವಿತರಣೆ

ಮಾ. 18, 19: ಉಚಿತ ಶ್ರವಣ ತಪಾಸಣೆ, ಸಹಾಯಧನದಲ್ಲಿ ಶ್ರವಣ ಯಂತ್ರ ವಿತರಣೆ


ಪರ್ಯಾಯ ಶೀರೂರು ಮಠ ಹಾಗೂ ವಾಮನ ವಿಠ್ಠಲ ಟ್ರಸ್ಟ್ನ ಆಶ್ರಯದಲ್ಲಿ ಮಲ್ಪೆಯ ಟೀಮ್ ಈಶ್ವರ್ ಮಲ್ಪೆ ಸಹಯೋಗದಲ್ಲಿ ಮಾ.18 ಮತ್ತು 19ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ಉಚಿತ ಶ್ರವಣ ತಪಾಸಣೆ ಹಾಗೂ ಸಹಾಯಧನದಲ್ಲಿ ಶ್ರವಣ ಯಂತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಟೀಮ್ ಈಶ್ವರ ಮಲ್ಪೆ ಬಳಗದ ಲವ ಬಂಗೇರ ಅವರು ತಿಳಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಟೀಮ್ ಈಶ್ವರ ಮಲ್ಪೆ ಬಳಗ ಆಯೋಜಿಸುತ್ತಿರುವ ಶಿಬಿರವನ್ನು  ಪರ್ಯಾಯ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸುವರು ಎಂದರು.

ಕಿವಿಯ ಸಮಸ್ಯೆ ಇರುವ ಯಾರೂ ಇದರಲ್ಲಿ ಭಾಗವಹಿಸಬಹುದು. ಹಿರಿಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಭಾಗವಹಿಸುವ ಮುನ್ನ ದೂರವಾಣಿ ಕರೆ ಮಾಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಮೊದಲು ನೊಂದಾಯಿ ಸಿಕೊಂಡ 30 ಮಂದಿಗೆ ಮಾತ್ರ ಪ್ರತಿದಿನ ಅವಕಾಶ ವಿರುತ್ತದೆ. ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ಪರೀಕ್ಷೆ ನಡೆಸಲಿದ್ದಾರೆ. ಅಗತ್ಯವಿರುವವರಿಗೆ ಶೇ.40ರ ರಿಯಾಯಿತಿ ದರದಲ್ಲಿ ಶ್ರವಣ ಸಾಧನ ವಿತರಿಸಲಾಗುತ್ತದೆ. ಹೆಸರು ನೊಂದಾಯಿಸಲು +918951804399 ಸಂಖ್ಯೆಗೆ ಕರೆ ಮಾಡಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ತಜ್ಞ ವೈದ್ಯೆ ಡಾ.ಅಂಕಿತ ಕಲ್ಮಾಡಿ ಹಾಗೂ ರಕ್ಷಿತ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article