ಕಟಪಾಡಿ ರೋಟರಿ ಕ್ಲಬ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ
Monday, March 16, 2026
ಕಟಪಾಡಿ ರೋಟರಿ ಕ್ಲಬ್ ನೇತೃತ್ವದಲ್ಲಿ ರೋಟೆರಿ ಸಮುದಾಯದಳ ಮೂಡಬೆಟ್ಟು ಮತ್ತು ಅಚ್ಚಡ ಮಹಿಳಾ ಸಂಘದವರೊಂದಿಗೆ ಜಂಟಿಯಾಗಿ ವಿಶ್ವ ಮಹಿಳಾ ದಿನಾಚರಣೆಯನ್ನು ಅಚ್ಚಡ ಧೂಮಾವತಿ ದೇವಸ್ಥಾನ ವಟಾರದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟ್ಪಾಡಿ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಆಶಾ ಅಂಚನ್ ರವರು ವಹಿಸಿದ್ದರು. ಈ ವೇಳೆ ಅಧ್ಯಕ್ಷೆ ಆಶಾ ಅಂಚನ್ ಅವರು, ಮಹಿಳೆಯರು ಒಗ್ಗೂಡಿಕೊಂಡು ಸಂಘವನ್ನು ಬಲಪಡಿಸತಕ್ಕದ್ದು ಪ್ರತಿಯೊಬ್ಬ ಮಹಿಳೆಯರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಲ್ಲದೆ ಮನೆ ಮನೆ ಭಜನಾ ಕಾರ್ಯಕ್ರಮವನ್ನು ಆರಂಭಿಸಬೇಕಾಗಿ ತಿಳಿಸಿದರು.
ರೋಟೇರಿಯನ್ ಶಕುಂತಲಾ ಎ. ಪೂಜಾರಿ ತಮ್ಮ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ರೊಟೇರಿಯನ್ ತುಳಸಿ ದೇವಾಡಿಗ ಮಹಿಳೆಯರಿಗೆ ಹಿತನುಡಿಯೊಂದಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಧೂಮಾವತಿ ಮಹಿಳಾ ಮಂಡಲದ ಅಧ್ಯಕ್ಷ ಗೀತಾ ದೇವಾಡಿಗ, ಉಪಾಧ್ಯಕ್ಷ ಶಕುಂತಲಾ ದೇವಾಡಿಗ, ಮೂಡಬೆಟ್ಟು ಸಮುದಾಯದಳದ ಅಧ್ಯಕ್ಷ ಜಯಂತಿ ಜಯಂತಿ ಇಂದುಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೂರು ಮಂದಿ ಅಂಗನವಾಡಿ ಶಿಕ್ಷಕಿಯರನ್ನು, ಇಬ್ಬರು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿದ್ದಲ್ಲದೆ, ಮಹಿಳಾ ಮಂಡಲದ ಎಲ್ಲ ಸದಸ್ಯರನ್ನು ಶಾಲು ಹೊದಿಸಿ ಹೂ ನೀಡಿ ಡ್ರೈ ಫ್ರೂಟ್ಸ ಮತ್ತು ಕಿರುಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಅಲ್ಲದೆ 10 ಮನೆಯ ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಯರಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ವಿತರಿಸಲಾಯಿತು.
ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಶ್ರೀ ಗುರು ಕುಣಿತ ಭಜನೆಯ ಸದಸ್ಯರಾದ ಆಶಾ, ಸರಸ್ವತಿ, ಕಲಾವತಿ ಹಾಗೂ ಧೂಮಾವತಿ ಮಹಿಳಾ ಮಂಡಲದ ಸರ್ವ ಸದಸ್ಯರು ಸಹಕಾರಿಯಾಗಿದ್ದರು. ಮಹಿಳಾ ಮಂಡಲದ ಸದಸ್ಯ ತ್ರಿಶಾ ಕಾರ್ಯಕ್ರಮ ನಿರ್ವಹಿಸಿದರೆ ಆಶಾ ಧನ್ಯವಾದ ನೀಡಿದರು.

