ಜೆಸಿಐ ಉಡುಪಿ ಇಂದ್ರಾಳಿ ಘಟಕದ 2026ನೇ ಸಾಲಿನ ಪದಪ್ರದಾನ ಸಮಾರಂಭ
Saturday, March 28, 2026
ಜೆಸಿಐ ಉಡುಪಿ ಇಂದ್ರಾಳಿ ಘಟಕದ 2026 ನೇ ಸಾಲಿನ ಪದಪ್ರದಾನ ಸಮಾರಂಭವು ಉಡುಪಿ ಹೋಟೆಲ್ ಶಾರದಾ ಇಂಟರ್ನ್ಯಾಷನಲ್ ನಲ್ಲಿ ನೆರವೇರಿತು.
2025 ನೇ ಸಾಲಿನ ಅಧ್ಯಕ್ಷರಾದ ಜೇಸಿ. ರಿತೇಶ್ ಸುವರ್ಣ ರವರು ನೂತನ ಅಧ್ಯಕ್ಷರಾದ ಜೇಸಿ ವಿಪುಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಮಹಿಳಾ ಕ್ರೀಡಾಪಟು ಅರುಣಕಲಾರಾವ್ ಹಾಗೂ ವಲಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಭಾಗವಹಿಸಿದರು. ಇನ್ಸ್ಟಾಲೇಷನ್ ಆಫೀಸರ್ ಆಗಿ ವಲಯ 15ರ ಉಪಾಧ್ಯಕ್ಷರಾದ ಜೆ. ಎಫ್. ಎಂ. ಪ್ರದೀಪ್ ಶೆಟ್ಟಿ ಭಾಗವಹಿಸಿದರು.
ಹಿರಿಯ ಸದಸ್ಯರಾದ ಜೇಸಿ.ರಾಧಾಕೃಷ್ಣ ರವರು ಅತಿಥಿ ಗಣ್ಯರನ್ನುವೇದಿಕೆಗೆ ಆಹ್ವಾನಿಸಿದರು. ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಯಿತು. ವಲಯಧಿಕಾರಿಗಳು ಹಾಗೂ ಇತರ ಘಟಕದ ಅಧ್ಯಕ್ಷರುಗಳು ಭಾಗವಹಿಸಿ ಶುಭ ಕೋರಿದರು. ಘಟಕದ ಪೂರ್ವ ಅಧ್ಯಕ್ಷರುಗಳಾದ ಅಶೋಕ್ ಪೂಜಾರಿ, ಎಂ.ಏನ್ ನಾಯಕ್, ಜ್ಯೋತಿ ಪ್ರಶಾಂತ್, ಕೀರ್ತೆಶ್, ಡಾ.ಚಿತ್ರ ನೆಗಳೂರ್, ರಾಷ್ಟ್ರೀಯ ತರಬೇತುದಾರರಾದ ಡಾ.ವಿಜಯ್ ನೆಗಳೂರ್ ಹಾಗೂ ಸದಸ್ಯರು ಭಾಗವಹಿಸಿದ್ದರು. ಘಟಕದ ನೂತನ ಕಾರ್ಯದರ್ಶಿ ಹರಿಪ್ರಸಾದ್ ವಂದನಾರ್ಪಣೆ ಗೈದರು.