ಮಂಗಳೂರು ಜಂಕ್ಷನ್ - ಸೂರತ್ ರೈಲು ಸಂಚಾರದ ಅವಧಿ ವಿಸ್ತರಣೆ
Saturday, March 28, 2026
ಸೂರತ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುವ ಎಕ್ಸ್‌ಪ್ರೆಸ್ ವಿಶೇಷ ರೈಲು ಹಾಗೂ ಅಹಮದಾಬಾದ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ಸಾಪ್ತಾಹಿಕ ರೈಲಿನ ಸಂಚಾರ ಅವಧಿಯನ್ನು ಮೇ ತಿಂಗಳ ಕೊನೆಯವರೆಗೆ ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.09057 ಸೂರತ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಪ್ರತಿ ಬುಧವಾರ ಹಾಗೂ ರವಿವಾರ ಸಂಚರಿ ಸುವ ರೈಲಿನ ಅವಧಿಯನ್ನು ಮೇ 31ರವರೆಗೆ, ರೈಲು ನಂ.09058 ಮಂಗಳೂರು ಜಂಕ್ಷನ್ ಹಾಗೂ ಸೂರತ್ ನಡುವೆ ಪ್ರತಿ ಗುರುವಾರ ಮತ್ತು ಸೋಮವಾರ ಸಂಚರಿಸುವ ರೈಲಿನ ಸಂಚಾರ ಅವಧಿಯನ್ನು ಜೂ.1ರವರೆಗೆ ವಿಸ್ತರಿಸಲಾಗಿದೆ.
ಅದೇ ರೀತಿ ರೈಲು ನಂ.09424 ಅಹಮದಾಬಾದ್-ಮಂಗಳೂರು ಜಂಕ್ಷನ್ ನಡುವೆ ಪ್ರತಿ ಶುಕ್ರವಾರ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲಿನ ಸಂಚಾರವನ್ನು ಮೇ 29 ಹಾಗೂ ರೈಲು ನಂ.09423 ಮಂಗಳೂರು ಜಂಕ್ಷನ್ ಹಾಗೂ ಅಹಮದಾಬಾದ್ ನಡುವೆ ಪ್ರತಿ ಶನಿವಾರ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲಿನ ಸಂಚಾರವನ್ನು ಮೇ 30ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.