ಹಿರಿಯ ಛಾಯಾಚಿತ್ರ ಗ್ರಾಹಕ ಆಸ್ಟ್ರೋ ಮೋಹನ್‌ಗೆ ರೋಸ್ ಅಂತಾರಾಷ್ಟ್ರೀಯ ಪ್ರಶಸ್ತಿ
Saturday, March 28, 2026
ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರಿಗೆ ರೋಸ್ ಅಂತಾರಾಷ್ಟ್ರೀಯ ಫೋಟೋಗ್ರಫಿ ಸರ್ಕ್ಯೂಟ್ ನಲ್ಲಿ 3 ಪಿಎಸ್‌ಎ ಚಿನ್ನದ ಪದಕಗಳು, ಜಡ್ಜಸ್ ಚಾಯ್ಸ್ ಪ್ರಶಸ್ತಿ, ಜಿಎನ್‌ಜಿ ಗೋಲ್ಡ್ ಪದಕ ಹಾಗೂ ಹಾನರೇಬಲ್ ಮೆನ್ಶನ್ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಈ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯು ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ, ಇಂಡಿಯಾ ಇಂಟರ್‌ನ್ಯಾಷನಲ್ ಗ್ರೂಪ್, ಜಿಎನ್ ಜಿ ಕ್ಲಬ್ ಸಂಸ್ಥೆಗಳ ಮಾನ್ಯತೆ ಹೊಂದಿದ್ದು, ವಿಶ್ವದ ಅನೇಕ ಅಂತಾರಾಷ್ಟ್ರೀಯ ಛಾಯಾಗ್ರಾಹಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಆಸ್ಟ್ರೋ ಮೋಹನ್ ಅವರ ಚಿತ್ರ ಬ್ಯಾಟಲ್ ಅಗೈನ್ಸ್ ದ ಪ್ಲೇಮ್ಸ್ ಫೋಟೋ ಪತ್ರಿಕೋದ್ಯಮ ವಿಭಾಗದಲ್ಲಿ ಪಿಎಸ್‌ಎ ಗೋಲ್ಡ್ ಪದಕ ಹಾಗೂ ವಿಶೇಷ ಜಡ್ಜಸ್ ಚಾಯ್ಸ್ ಪ್ರಶಸ್ತಿ ಪಡೆದುಕೊಂಡಿದೆ.
ಇದೇ ಚಿತ್ರವು ಜನರಲ್ ವಿಭಾಗದಲ್ಲಿಯೂ ಪಿಎಸ್‌ಎ ಗೋಲ್ಡ್ ಪದಕ ಗಳಿಸಿದ್ದು, ಒಂದೇ ಚಿತ್ರವು ಎರಡು ವಿಭಿನ್ನ ವಿಭಾಗಗಳಲ್ಲಿ ಅಗ್ರ ಪ್ರಶಸ್ತಿ ಗಳಿಸಿದೆ.