-->
 ನೇಜಾರು ತಾಯಿ–ಮಕ್ಕಳ ಹತ್ಯೆ ಪ್ರಕರಣ: ಇನ್ನೂ 8 ಸಾಕ್ಷಿಗಳ ವಿಚಾರಣೆ

ನೇಜಾರು ತಾಯಿ–ಮಕ್ಕಳ ಹತ್ಯೆ ಪ್ರಕರಣ: ಇನ್ನೂ 8 ಸಾಕ್ಷಿಗಳ ವಿಚಾರಣೆ


ಉಡುಪಿ ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಫೆ.27 ಹಾಗೂ 28ರಂದು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಒಟ್ಟು ಎಂಟು ಸಾಕ್ಷಿಗಳ ಮುಖ್ಯ ವಿಚಾರಣೆ ಮತ್ತು ಪಾಟಿ ಸವಾಲು ನಡೆಯಿತು.

ಪ್ರಕರಣದಲ್ಲಿ ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ನಡೆಸಿದರೆ, ಆರೋಪಿ ಪರ ವಕೀಲ ರಾಜು ಪೂಜಾರಿ ಪಾಟಿ ಸವಾಲು ನಡೆಸಿದರು. ಈ ಮೂಲಕ ಈವರೆಗೆ ಒಟ್ಟು 34 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ.

ಮುಂದಿನ ವಿಚಾರಣೆಯನ್ನು ಎ.1 ಮತ್ತು ಎ.2ಕ್ಕೆ ನಿಗದಿಪಡಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಆ ದಿನದಂದು ಮತ್ತೆ 10ರಿಂದ 15 ಸಾಕ್ಷಿಗಳ ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಲು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಆರೋಪಿ ಪ್ರವೀಣ್ ಚೌಗುಲೆ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ಮುಂದಿನ ವಿಚಾರಣೆ ನಿರೀಕ್ಷೆಯಲ್ಲಿದೆ.

Ads on article

Advertise in articles 1

advertising articles 2

Advertise under the article