ಇಂದು ಕೇತುಗ್ರಸ್ತ ಚಂದ್ರಗ್ರಹಣ; ಕರ್ನಾಟಕದಲ್ಲಿ 9 ನಿಮಿಷ ಗೋಚರ
ಇಂದು ಹುಣ್ಣಿಮೆ ದಿನ ಚಂದ್ರಗ್ರಹಣ ಸಂಭವಿಸಲಿದೆ. ಕೇತುಗ್ರಸ್ತ ಚಂದ್ರಗ್ರಹಣ ಇಂದು ಸಂಜೆ 3.20ಕ್ಕೆ ಪ್ರಾರಂಭವಾಗಿ 6.47ಕ್ಕೆ ಕೊನೆಗೊಳ್ಳಲಿದೆ.
ಇದು 2026 ಏಕೈಕ ಚಂದ್ರಗಹಣ. ಹುಣ್ಣಿಮೆಯಂದು ನಡೆಯುವುದರಿಂದ ಭಾರತೀಯರಿಗೆ ಇದು ಗ್ರಹಣವೆಂದು ಅನಿಸದು. ಕಾರಣ ಗ್ರಹಣ ಸಂಪೂರ್ಣ ಮುಗಿಯುವ ಹಂತದಲ್ಲಿ ಚಂದ್ರೋದಯವಾಗುವುದರಿOದ ನಮಗೆ ಗ್ರಹಣದ ಚಂದ್ರ ಕಾಣುವುದೇ 9 ನಿಮಿಷ ಮಾತ್ರ. ಅದೂ ಪಾರ್ಶ್ವ ಚಂದ್ರಗ್ರಹಣ. ಬರೀ ಚಂದ್ರನ ಶೇ.8 ಭಾಗ ಮಾತ್ರ ಗ್ರಹಣ ಆವರಿಸಲಿದೆ.
ಸಂಜೆ 6.47ಕ್ಕೆ ಗ್ರಹಣ ಮುಗಿಯುವುದರಿಂದ ಗ್ರಹಣದ ಚಂದ್ರ ಕಾಣ ಸಿಗುವುದು ಕಷ್ಟ. ಈ ಗ್ರಹಣದ ಕಡೆಯ ಶೇ.8 ಅಂಶ ಅಂದರೆ ಬರೇ 9 ನಿಮಿಷ ಗ್ರಹಣ ಗೋಚರಿಸುವುದು ಎಂದು ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಉಡುಪಿ ತಿಳಿಸಿದ್ದಾರೆ.
ಇದು ಪಾರ್ಶ್ವ ಚಂದ್ರ ಗ್ರಹಣ. ಅದೂ ಕೇವಲ ಚಂದ್ರ 8 ಅಂಶ ಭಾಗ ಮಾತ್ರ ಗ್ರಹಣ ಆವರಿಸಲಿದೆ. ಉಡುಪಿಗೆ ಸೂರ್ಯಾಸ್ತ 6:38ಕ್ಕೆ ಮತ್ತು ಚಂದ್ರೋದಯ 6:38ಕ್ಕೆ. ಆ ಕಡೆ ಪಶ್ಚಿಮದಲ್ಲಿ ಸೂರ್ಯಾಸ್ತವಾದರೆ ಈ ಕಡೆ ಪೂರ್ವದಲ್ಲಿ ಪಾರ್ಶ್ವಗ್ರಹಣದ ಚಂದ್ರೋದಯ ಕಾಣಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂಜೆ 6:47ಕ್ಕೆ ಗ್ರಹಣ ಮುಗಿಯುವದರಿಂದ ಗ್ರಹಣದ ಚಂದಿರ ಕಾಣ ಸಿಗುವುದು ಕಷ್ಟ. ಸೂರ್ಯ ಗ್ರಹಣದಲ್ಲಾದರೆ ಗ್ರಹಣದ ಬಿಂಬ ಪ್ರಾರಂಭ ಅಂತ್ಯ ಪ್ರತಿಬಿಂಬ ನೋಡಿ ಕರಾರುವಕ್ಕಾಗಿ ತಿಳಿಯಬಹುದು. ಆದರೆ ಚಂದ್ರ ಗ್ರಹಣದಲ್ಲಿ ಕಪ್ಪು ಆವರಿಸಿರುವುದು ಕರಾರುವಕ್ಕಾಗಿ ಕಾಣುವುದಿಲ್ಲ. ಸುಮಾರು 25 ಅಂಶ ಆವರಿಸಿದಾಗ ಅನುಭವಕ್ಕೆ ಬರು ತ್ತದೆ. ಈ ದಿನ ಗ್ರಹಣದ ಕಡೆಯ ಉಳಿದ ಭಾಗ ಬರೇ 8 ಅಂಶ. ಬರೇ ಒಂಭತ್ತೇ ನಿಮಿಷ. ಹಾಗಾಗಿ ಗ್ರಹಣ ನೋಡಲು ಕಷ್ಟ ಎಂದು ಡಾ. ಎ.ಪಿ ಭಟ್ ತಿಳಿಸಿದ್ದಾರೆ.