ವಿದ್ಯುತ್ ಕಂಬ ಮೈಮೇಲೆ ಬಿದ್ದು ಕಾರ್ಮಿಕ ಸಾವು
Tuesday, March 17, 2026
ವಿದ್ಯುತ್ ಕಂಬ ಅಳವಡಿಕೆ ಕಾಮಗಾರಿ ವೇಳೆ ಕಂಬವು ಮೈಮೇಲೆ ಬಿದ್ದು ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಮೃತರನ್ನು ಕೊಕ್ಕಡ ಗ್ರಾಮದ ಮಹಾವೀರ ಕಾಲನಿಯ ನಿವಾಸಿ ಶಿವಪ್ಪ(40) ಎಂದು ಗುರುತಿಸಲಾಗಿದೆ.
ಇವರು ಪುರುಷೋತ್ತಮ ಎಂಬ ಗುತ್ತಿಗೆದಾರರ ಜೊತೆ ಕಳೆದ ಕೆಲವು ವರ್ಷಗಳಿಂದ ಕೂಲಿ ಕಲಸ ಮಾಡುತ್ತಿದ್ದರು. ಸೋಮವಾರ ಶಿವಪ್ಪ ಅವರು ಕೊಕ್ಕಡ ಶ್ರೀರಾಮ ಭಜನಾ ಮಂದಿರದ ಬಳಿ ವಿದ್ಯುತ್ ಕಂಬ ಅಳವಡಿಕೆ ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ಪರಿಕರಗಳನ್ನು ಧರಿಸದೆ ಕೆಲಸ ಮಾಡುತ್ತಿದ್ದರು.
ಈ ವೇಳೆ ಕಂಬವು ಶಿವಪ್ಪ ರ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.