-->
 ಪೆರ್ಡೂರು ದೇವಸ್ಥಾನದ ಹಿಂದಿನ ಸಮಿತಿ ರದ್ದಾಗಲು ಒಳಜಗಳವೇ ಕಾರಣ- ಹಾಲಿ ಸದಸ್ಯ ರಾಜ್ ಕುಮಾರ್ ಶೆಟ್ಟಿ

ಪೆರ್ಡೂರು ದೇವಸ್ಥಾನದ ಹಿಂದಿನ ಸಮಿತಿ ರದ್ದಾಗಲು ಒಳಜಗಳವೇ ಕಾರಣ- ಹಾಲಿ ಸದಸ್ಯ ರಾಜ್ ಕುಮಾರ್ ಶೆಟ್ಟಿ


ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ರದ್ದಾಗಲು ಅವರ ಒಳ ಜಗಳವೇ ಕಾರಣ ಹೊರತು ಈಗಿನ ವ್ಯವಸ್ಥಾಪನಾ ಸಮಿತಿಯಾಗಲಿ ಕಾಂಗ್ರೆಸ್ ಸರ್ಕಾರವಾಗಲಿ ಕಾರಣವಲ್ಲ ಎಂದು ಸಮಿತಿಯ ಸದಸ್ಯ ರಾಜ್ ಕುಮಾರ್ ಶೆಟ್ಟಿ ದೊಡ್ಮನೆ ಸ್ಪಷ್ಟಪಡಿಸಿದರು. 

ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸ್ಥಳೀಯರಾದ ಸುರೇಶ್ ಸೇರ್ವೇಗಾರ ಅವರು ಈ ಹಿಂದೆ ಮಾಡಿರುವ ಆರೋಪಗಳು ಹಾಗೂ ಎಲ್ಲ ವಿಚಾರಗಳು ಸತ್ಯಕ್ಕೆ ದೂರವಾದುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಳೆಯ ಸಮಿತಿ ರದ್ದಾಯಿತು ಎನ್ನುವ ಹೇಳಿಕೆಯನ್ನು ಸುರೇಶ್ ಸೇರ್ವೇಗಾರ್ ನೀಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದು. ಕಾಂಗ್ರೆಸ್ ಸರ್ಕಾರ ಬರುವ ಮೊದಲೇ ಸಮಿತಿಯನ್ನು ರದ್ದುಗೊಳಿಸಲಾಗಿದೆ. ಹಳೆಯ ವ್ಯವಸ್ಥಾಪನಾ ಸಮಿತಿಯವರು ಒಳ ಜಗಳದಲ್ಲೇ 3 ವರ್ಷ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ದಿನ ದೂಡಿದ್ದರು. ಅಲ್ಲದೇ ಅಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದ ರಾಮಮೂರ್ತಿ ಹೆಬ್ಬಾರ್ ಅವರು ಇದು ಕಾಲಹರಣ ಮಾಡುವ ರಾಜಕೀಯ ಪೂರಿತ ಸಮಿತಿ ಎಂದು ರಾಜೀನಾಮೆ ಪತ್ರ ಬರೆದಿದ್ದರು. ಜೀರ್ಣೋದ್ಧಾರ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ಇದ್ದಾಗ ನಾವು ಕೋರ್ಟ್ ಗೆ ಕೇವಿಯೆಟ್ ಹಾಕಿದ್ದು ಹೌದು. ಕೆಲಸ ಮಾಡದ ವ್ಯವಸ್ಥಾಪನಾ ಸಮಿತಿ ರದ್ದು ಮಾಡಬೇಕೆಂದು ಕೋರ್ಟ್ಗೆ ಹೋಗಿದ್ದೇವೆ ಎಂದು ಸ್ಪಷ್ಟಪಡಿಸಿದರು. 

ಈ ಮೊದಲು ದೇವಸ್ಥಾನದ ವಿಚಾರದಲ್ಲಿ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ಸಂಜೆ ಬಿಜೆಪಿ ಪಟಾಲಂ ಕಟ್ಟಿಕೊಂಡು ಡಿಸಿ ಕಚೇರಿಗೆ ಹೋಗುತ್ತಾರೆ. ನೀವು ಬಿಜೆಪಿಗೆ ಮಾತ್ರ ಶಾಸಕರಲ್ಲ. ದೇವಸ್ಥಾನ ವಿಚಾರದಲ್ಲಿ ನಿಮ್ಮ ಕಾರ್ಯಕರ್ತರು ಹೇಳಿದ್ದಕ್ಕೆ ತಲೆ ಅಲ್ಲಾಡಿಸಬೇಡಿ ಎಂದರು. ಸೊರಕೆ ಅವರು ಸುರೇಶ್ ಸೇರ್ವೇಗಾರ್ ಅವರನ್ನೂ ಎಲ್ಲೂ ತೇಜೋವಧೆ ಮಾಡಿಲ್ಲ. ಸೊರಕೆ ಅವರು ಬೇಕಂತಲೂ ಸೇರ್ವೇಗಾರ ಅಂತ ಹೇಳಿಲ್ಲ ಎಂದರು. ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಸೊರಕೆ ಹಾಗು ಗುರ್ಮೆ ಅವರ ಸಹಕಾರವು ಬೇಕು. ಈಗಿರುವ ವ್ಯವಸ್ಥಾಪನಾ ಸಮಿತಿಯವರು ಕೆಲಸ ಮಾಡಲು ಹಾಗು ಮಾಡಿಸಿಕೊಳ್ಳಲು ತಯಾರಿದ್ದೇವೆ. ನಮ್ಮ ವ್ಯವಸ್ಥಾಪನಾ ಸಮಿತಿ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದರು. ದೇವಸ್ಥಾನದ ವಿಚಾರದಲ್ಲಿ ದಿನಾ ಕಚ್ಚಾಡುವುದು ಸರಿಯಲ್ಲ ಎಂದರು. 

ಸುದ್ದಿಗೋಷ್ಟಿಯಲ್ಲಿ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ, ತಾಂತ್ರಿಕ ಸಮಿತಿ ಸದಸ್ಯ ಸಂತೋಷ್ ಕುಲಾಲ್, ಸದಸ್ಯರಾದ ದಿನೇಶ್ ಪೂಜಾರಿ, ಲಲಿತಾಂಬ ಮೊದಲಾದವರು ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article