ರಾಮೋತ್ಸವ ಪ್ರಯುಕ್ತ ಉಡುಪಿ ಅನಂತೇಶ್ವರ ದೇವಾಲಯದಲ್ಲಿ ರಥೋತ್ಸವ
Saturday, March 28, 2026
ಉಡುಪಿಯ ಅನಂತೇಶ್ವರ ದೇವಾಲಯದಲ್ಲಿ ರಾಮೋತ್ಸವದ ಪ್ರಯುಕ್ತ ರಥೋತ್ಸವ ಜರಗಿತ್ತು. ಇದರ ಅಂಗವಾಗಿ ದೇವರಿಗೆ ಆರತಿಯನ್ನು ಬೆಳಗುವುದರ ಮೂಲಕ ರಥೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.
ಅಲಂಕೃತ ರಥದಲ್ಲಿ ದೇವರನ್ನು ಇರಿಸಿ ವಾದ್ಯ ಸೇವೆಯೊಂದಿಗೆ ರಥಬೀದಿಯಲ್ಲಿ ರಥೋತ್ಸವವನ್ನು ನಡೆಸಲಾಯಿತು. ವಿಶೇಷವಾಗಿ ಸುಡುಮದ್ದು ಪ್ರದರ್ಶನ ನಡೆಯಿತು. ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ದೇವಾಲಯದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು.


