ಹೊಳೆಯಲ್ಲಿ ಈಜಲು ತೆರಳಿದ ಯುವಕ ಮುಳುಗಿ ಸಾವು
Monday, March 23, 2026
ಉಡುಪಿ ಜಿಲ್ಲೆಯ ಜಡ್ಕಲ್ ಗ್ರಾಮದ ಹಯ್ಯಂಗಾರು ಹೊಳೆಯಲ್ಲಿ ಈಜಲು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಗೋಳಿಹೊಳೆ ಗ್ರಾಮದ ಅರೆಶಿರೂರು ನಿವಾಸಿ, ರಿಕ್ಷಾ ಚಾಲಕ ಸಂದೀಪ್ ನಾಯ್ಕ (32) ಎಂದು ಗುರುತಿಸಲಾಗಿದೆ.
ಮಾರ್ಚ್ 22ರಂದು ಸ್ನೇಹಿತರೊಂದಿಗೆ ಈಜಲು ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗೋಳಿಹೊಳೆಯ ಹೊಟೇಲ್ ಉದ್ಯಮಿ ಬಾಬಣ್ಣ ಅವರ ಪುತ್ರರಾಗಿದ್ದ ಸಂದೀಪ್ ನಾಯ್ಕ ಅವಿವಾಹಿತರಾಗಿದ್ದು, ತಂದೆ-ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.