-->
 ಮಹಿಳೆಯು ಮಹಿಳೆಯಾಗಿರುವುದೇ ಸಂಭ್ರಮದ ಆಚರಣೆ- ಶ್ರುತಿ ಶಂಕರ್ (Video)

ಮಹಿಳೆಯು ಮಹಿಳೆಯಾಗಿರುವುದೇ ಸಂಭ್ರಮದ ಆಚರಣೆ- ಶ್ರುತಿ ಶಂಕರ್ (Video)


ಮಹಿಳಾ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಬ್ಲಿಕ್ ನೆಕ್ಸ್ಟ್ ಮೀಡಿಯಾದ ಕ್ಲಸ್ಟರ್ ಹೆಡ್ ಶ್ರುತಿ ಶಂಕರ್ ಅವರನ್ನು ಸನ್ಮಾನಿಸಲಾಯಿತು. 


ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರುತಿ ಶಂಕರ್ ಅವರು, ಮಹಿಳೆಯು ಸುಖ ದುಃಖಗಳಿಗೆ ಸ್ಪಂದಿಸುವಷ್ಟು ಪುರುಷರು ಸ್ಪಂಧಿಸುವುದಿಲ್ಲ. ಅಲ್ಲದೇ ಮಹಿಳೆಯು ತಾಯ್ತನ ಸೇರಿದಂತೆ ಎಲ್ಲಾ ಸಣ್ಣ ಖುಷಿಯನ್ನೂ ಸಂಭ್ರಮಿಸುತ್ತಾಳೆ. ಹಾಗಾಗಿ ಮಹಿಳೆಯು ಮಹಿಳೆಯಾಗಿರುವುದೇ ಒಂದು ಸಂಭ್ರಮದ ಆಚರಣೆ ಎಂದು ಅಭಿಪ್ರಾಯಪಟ್ಟರು. ಒಂದು ಕಾಲದಲ್ಲಿ ಮಹಿಳೆಗೆ ಗಂಡುಮಕ್ಕಳೇ ಜನಿಸಲಿ ಎಂದು ಪ್ರಾರ್ಥಿಸುವ ಕಾಲವಿತ್ತು. ಆದರೆ ಈಗ ಅದು ಬದಲಾಗಿದೆ. ಹೆಣ್ಣು ಮಕ್ಕಳೇ ಜನಿಸಲಿ ಎನ್ನುವ ಕಾಲ ಬಂದಿದೆ. ಇದಕ್ಕೆ ಕಾರಣ ಹೆಣ್ಣು ಗಂಡಿನಷ್ಟೇ ಸಮಾನಳು. ಗಂಡಿಗಿಂತ ಒಂದು ಪಟ್ಟು ತಂದೆ ತಾಯಿಯ ಕಷ್ಟಕ್ಕೆ ಸ್ಪಂದಿಸುತ್ತಾಳೆ ಎನ್ನುವುದು ಈಗ ಸಮಾಜಕ್ಕೆ ಅರಿವಾಗಿದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸದಸ್ಯೆಯರಿಗೆ ಉಡುಗೊರೆಗಳನ್ನು ವಿತರಿಸಲಾಯಿತು. ಮಾಜಿ ಜಿಲ್ಲಾ ಗವರ್ನರ್ ಡಾ. ಎ. ರವೀಂದ್ರನಾಥ ಶೆಟ್ಟಿ, ವಲಯಾಧ್ಯಕ್ಷ ಲೂಯಿಸ್ ಲೋಬೋ, ಲಯನ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ರೇಣುಕಾ ದಾಮೋದರ್ ಶೆಟ್ಟಿ, ಕಾರ್ಯದರ್ಶಿ ರಾಧಿಕಾ ಶೆಣೈ, ಕೋಶಾಧಿಕಾರಿ ಸುಜಯ ಶೆಟ್ಟಿ, ಲಿಯೋ ಕ್ಲಬ್ ಉಡುಪಿ ಅಧ್ಯಕ್ಷೆ ಅವನಿ ಕಿಣಿ, ಕೋಶಾಧಿಕಾರಿ ಭೂಮಿಕಾ ಎಂ. ಮತ್ತಿತರರು ಉಪಸ್ಥಿತರಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿನೇಶ್ ಕಿಣಿ ಸ್ವಾಗತಿಸಿ, ಕಾರ್ಯದರ್ಶಿ ಡಾ. ರೋಶನ್ ಕುಮಾರ್ ಶೆಟ್ಟಿ ವಂದಿಸಿದರು. 





Ads on article

Advertise in articles 1

advertising articles 2

Advertise under the article