-->
 ಉಡುಪಿ ಆರೋಗ್ಯ ಕೇಂದ್ರದ ಪಕ್ಕದಲ್ಲೇ ತೆರಿಗೆ ಪಾವತಿ ಕೇಂದ್ರ ನಿರ್ಮಾಣ; ಸಾರ್ವಜನಿಕರ ವಿರೋಧ(video)

ಉಡುಪಿ ಆರೋಗ್ಯ ಕೇಂದ್ರದ ಪಕ್ಕದಲ್ಲೇ ತೆರಿಗೆ ಪಾವತಿ ಕೇಂದ್ರ ನಿರ್ಮಾಣ; ಸಾರ್ವಜನಿಕರ ವಿರೋಧ(video)



ಉಡುಪಿಯ ಕವಿ ಮುದ್ದಣ ಮಾರ್ಗದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌAಡ್ ಕೆಡವಿ ಒಳಾಂಗಣದಲ್ಲಿ ನಗರಸಭೆಯ ತೆರಿಗೆ ಪಾವತಿ ಕೇಂದ್ರ ಸ್ಥಾಪನೆಯ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಲಿದೆ. ಜಿಲ್ಲಾಡಳಿತವು ತಕ್ಷಣ ತೆರಿಗೆ ಪಾವತಿ ಕೇಂದ್ರದ, ಅವೈಜ್ಞಾನಿಕ  ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಸಮಾಜ ಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯೇ ನಗರಸಭೆಯ ತೆರಿಗೆ ಪಾವತಿ ಕೇಂದ್ರ ಆರಂಭವಾದರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಗುಂಪಾಗಿ ಸೇರುವ ತೆರಿಗೆ ಪಾವತಿದಾರರ ವ್ಯವಹಾರ ಮಾತುಕತೆಗಳ ಗದ್ದಲ ಕಿರಿಕಿರಿ ಉಂಟು ಮಾಡಲಿದೆ. ಅಲ್ಲದೇ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ವಾಹನ ನಿಲುಗಡೆಯಿಂದ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗೆಯೇ ಆರೋಗ್ಯ ಇಲಾಖೆಯ ಸ್ಥಳವನ್ನು ಬೇರೊಂದು ಕೆಲಸಕ್ಕೆ ಬಳಸಿಕೊಂಡಿರುವುದು ಅಪರಾಧವಾಗಿರುತ್ತದೆ. ಹಾಗಾಗಿ ನಗರಾಡಳಿತ ಕಛೇರಿಯ ಆಯಾಕಟ್ಟಿನ ಸ್ಥಳದಲ್ಲಿಯೇ ತೆರಿಗೆ ಪಾವತಿ ಕೇಂದ್ರವನ್ನು ನಿರ್ಮಾಣ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.  




Ads on article

Advertise in articles 1

advertising articles 2

Advertise under the article