ಮಳೆನೀರು ಹರಿಯುವ ಚರಂಡಿಗೆ ಡ್ರೈನೇಜ್ ನೀರು ಹರಿದು ಮಲಿನ; ರೋಗಭೀತಿಯಲ್ಲಿ ಜನ (Video)
Monday, March 02, 2026
ಮಣಿಪಾಲದಿಂದ ರಾಜೀವನಗರ ಸಂಪರ್ಕಿಸುವ ಮುಖ್ಯ ರಸ್ತೆಯ ಪೋಲಿಸ್ ವಸತಿ ಗೃಹದ ಬಳಿ ಮಳೆ ನೀರು ಹರಿಯುವ ಕಾಲುವೆಯಲ್ಲಿ ಡ್ರೈನೇಜ್ ನೀರು ಹರಿಯುತ್ತಿದ್ದು ಪರಿಸರವಿಡೀ ಗಬ್ಬು ನಾರುತ್ತಿದೆ. ಅಲ್ಲದೇ ಮಾರಕರೋಗಗಳು ಪಸರಿಸುವ ಭೀತಿ ಎದುರಾಗಿದೆ.
ಜನ ವಸತಿಗಳು, ವಾಣಿಜ್ಯ ಕಟ್ಟಡಗಳು, ಧಾರ್ಮಿಕ ಕೇಂದ್ರಗಳು ಇಲ್ಲಿವೆ. ಕಾನೂನು ಸುವ್ಯವಸ್ಥೆ ಕರ್ತವ್ಯ ಪಾಲನೆಯಲ್ಲಿರುವ ಪೋಲಿಸ್ ಸಿಬ್ಬಂದಿಗಳ ವಸತಿ ಗೃಹ ಕೂಡಾ ಈ ಪರಿಸರದಲ್ಲಿದೆ. ಆದರೆ ಕೊಳಚೆ ನೀರಿನಿಂದಾಗಿ ಈ ಪರಿಸರದಲ್ಲಿ ತೆರಳುವವರು ಗಬ್ಬ ವಾಸನೆಗೆ ಮೂಗು ಮುಚ್ಚಕೊಂಡು ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಇಷ್ಟೇ ಅಲ್ಲದೇ ಇಲ್ಲಿ ಹರಿಯುವ ಕೊಳಚೆನೀರು ಕಾಲುವೆಯಲ್ಲಿ ಹರಿದು ವಾಯುವಿಹಾರ ತಾಣವಾಗಿರುವ ಮಣ್ಣಪಳ್ಳದ ಕೆರೆಯನ್ನು ಸೇರುವುದು ಕಂಡುಬAದಿದೆ. ಕೆರೆಯ ಶುದ್ಧ ನೀರು ಮಲಿನವಾಗುವುದಲ್ಲದೆ, ವಿಷಕಾರಕ ನೀರಿನಿಂದಾಗಿ ಕೆರೆಯಲ್ಲಿರುವ ಜಲಚರಗಳು ನಾಶವಾಗುವ ಸಾಧ್ಯತೆಯು ಇದೆ.
ಜಿಲ್ಲಾಡಳಿತವು ಕೂಡಲೇ ಎಚ್ಚೆತ್ತು ಉದ್ಭವಿಸಿರುವ ಸಮಸ್ಯೆಯನ್ನು ಶೀಘ್ರಗತಿಯಲ್ಲಿ ಪರಿಹರಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಆಗ್ರಹಪಡಿಸಿದ್ದಾರೆ.