ಲಯನ್ಸ್ ಕ್ಲಬ್ ಮಣಿಪಾಲ್ ವತಿಯಿಂದ ರಾಜೀವ್ ನಗರ ಪಬ್ಲಿಕ್ ಶಾಲೆಗೆ 2 ತರಗತಿಗಳ ಕೊಡುಗೆ
Wednesday, April 08, 2026
ಲಯನ್ಸ್ ಕ್ಲಬ್ ಮಣಿಪಾಲ ಇದರ ವತಿಯಿಂದ ಮಣಿಪಾಲದ ರಾಜೀವ್ ನಗರದಲ್ಲಿರುವ ಪಬ್ಲಿಕ್ ಶಾಲೆಯಲ್ಲಿ "ಕೃಷ್ಣ ಬ್ಲಾಕ್" ಅಡಿಯಲ್ಲಿ ಸ್ಮಾರ್ಟ್ ಟಿವಿಗಳಿಂದ ಸಜ್ಜುಗೊಂಡ ಆಂಗ್ಲ ಮಾಧ್ಯಮ ಕೊಠಡಿ ಸಹಿತ ಎರಡು ವಿಶಾಲ ತರಗತಿಗಳನ್ನು ಲಯನ್ಸ್ ಜಿಲ್ಲೆ 317C ಇದರ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಉದ್ಘಾಟಿಸಿದರು. ಶಾಲಾ ಆವರಣದಲ್ಲಿ ಬೋಧಿ ವೃಕ್ಷ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಪ್ನಾ ಸುರೇಶ್ ಅವರು, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಕಲಿಕಾ ಅನುಕೂಲತೆಗಾಗಿ ನೀಡಿದ ತರಗತಿಗಳ ಕೊಡುಗೆ ಶ್ಲಾಘನೀಯ ಎಂದರು.
ಲಯನ್ಸ್ ಕ್ಲಬ್ ಮಣಿಪಾಲ ಇದರ ಕಾರ್ಯದರ್ಶಿ ಡಾ. ಹೆಚ್. ಗಣೇಶ್ ಪೈ ಮಾತನಾಡಿ, ದಾನಿಗಳ ನೆರವಿನಿಂದ ತರಗತಿಗಳ ಕಟ್ಟಡವನ್ನು ನಿರ್ಮಿಸಲಾಗಿದ್ದು, ಅವರ ಸಹಕಾರದಿಂದ ಕೆಲಸ ಸಂಪನ್ನಗೊಂಡಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಲಯನ್ಸ್ ಕ್ಲಬ್ ಮಣಿಪಾಲ ಇದರ ಅಧ್ಯಕ್ಷ ರಮೇಶ್ ಕಿಣಿ ಮಾತನಾಡಿ, ಮಕ್ಕಳ ಕಲಿಕೆಗೆ ಇದು ಉಪಯೋಗವಾಗಲಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ಶಾಲೆಗೆ ನೀವು ಕೂಡ ಕೊಡುಗೆ ನೀಡುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನೇತ್ರ ತಜ್ಞೆ ಡಾ. ಶಕೀಲಾ ಮಾತನಾಡಿ, ತರಗತಿ ಕೊಠಡಿಗಳು ಸುಂದರವಾಗಿ ಮೂಡಿ ಬಂದಿದ್ದು, ಕನ್ನಡದೊಂದಿಗೆ ಆಂಗ್ಲ ಮಾಧ್ಯಮದಿಂದ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಹಾಗಾಗಿ ಗಣೇಶ್ ಪೈ ಅವರ ಮುಂದಾಳತ್ವದಲ್ಲಿ ಎರಡು ಕಟ್ಟಡಗಳನ್ನು ನೀಡಲಾಗಿದೆ. ಈ ಕಾರ್ಯ ಪ್ರಶಂಸನೀಯ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಸಂಜೀವ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಈ ಕಟ್ಟಡವನ್ನು ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, Testprep Prints Pvt Ltd, TMG Sunidhi Foundation (Manipal Energy and Infratech Pvt Ltd ) Koramangala Constructions Pvt Ltd ಸಂಸ್ಥೆಗಳ CSR ಸಹಾಯದಿಂದ ನಿರ್ಮಿಸಲಾಗಿದೆ.
.jpeg)
.jpeg)
